ಕರ್ನಾಟಕ

ರಾತ್ರಿ ಪಾಳಿಗೆ ಮಹಿಳೆಯರು ಕೆಲಸ ಮಾಡಲು ಅವಕಾಶ ಕಲ್ಪಿಸಿ!

Pinterest LinkedIn Tumblr

ladies
ಬೆಂಗಳೂರು(ಡಿ.22): ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ.ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕೆಲವು ನಿಬಂಧನೆಗಳನ್ನು ಹೇರಿ ಕಾರ್ಮಿಕ ಇಲಾಖೆ ಆದೇಶ ಮಾಡಿದೆ.
ಮಹಿಳೆಯರ ರಾತ್ರಿ ಪಾಳಿಗೆ ನಿಬಂಧನೆಗಳು
– ರಾತ್ರಿ ಪಾಳಿಯಲ್ಲಿ ಮಹಿಳೆ ಕೆಲಸ ಮಾಡಲು ಬಯಸಿದರೆ ಮಾತ್ರ ಅವಕಾಶ.
– ರಾತ್ರಿ ಪಾಳಿಯಲ್ಲಿ ಒಬ್ಬರಿಗಿಂತ.ಹೆಚ್ಚು ಮಹಿಳೆಯರು ಇರಬೇಕು.
– ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು.
– ಮಹಿಳೆಯರನ್ನು ಡ್ರಾಪ್ ಮಾಡುವ ವ್ಯವಸ್ಥೆ ಇರಬೇಕು.
– ಮೊದಲು ಪಿಕ್.ಮಾಡಿ ಮೊದಲು ಡ್ರಾಪ್ ಮಾಡಬೇಕು.
– ಮಹಿಳೆಯರು ಕೆಲಸ ಮಾಡುವಲ್ಲಿ ರಾತ್ರಿ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಬೇಕು.
– ಡ್ರಾಪ್ ಮಾಡುವ ವಾಹನ ಚಾಲಕನ ಸಂಪೂರ್ಣ
– ಮಾಹಿತಿ ಪಡೆದಿರಬೇಕು.
– ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯ ಬಗ್ಗೆ ಅಪರಿಚಿತ ವ್ಯಕ್ತಿಗೆ ಮಾಹಿತಿ ನೀಡುವಂತಿಲ್ಲ.
– ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವಕಾಶ.
– ನಿಯಮ ಉಲ್ಲಂಘಿಸುವ ಸಂಸ್ಥೆಯ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ

Comments are closed.