ಕರ್ನಾಟಕ

ಆನ್`ಲೈನ್`ನಲ್ಲಿ ಬುಕ್ ಮಾಡಿ ಹಣವನ್ನು ಮನೆಗೇ ತರಿಸಿಕೊಳ್ಳಿ!

Pinterest LinkedIn Tumblr

notes21
ಬೆಂಗಳೂರು(ಡಿ22): ಆನ್`ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್ ಡೀಲ್, ಹಣಕ್ಕಾಗಿ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ನಿಂತು ನಿಂತು ಬೇಸರಗೊಂಡಿರುವ ಜನರಿಗೆ 2000 ರೂಪಾಯಿಯ ನೋಟುಗಳನ್ನ ಕ್ಯಾಶ್ ಡೆಲಿವರಿ ಮಾಡುವ Cash@Home ಎಂಬ ಹೊಸ ವ್ಯವಸ್ಥೆಯನ್ನ ಕಲ್ಪಿಸಿದೆ.
ಕ್ಯಾಶ್ ಅಟ್ ಹೋಮ್ ಹೇಗೆ ಕೆಲಸ ಮಾಡುತ್ತೆ..?
ಮನೆಗೇ ಕ್ಯಾಶ್ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ತಮ್ಮ ಮೊಬೈಲಿನಲ್ಲಿ ಸ್ನ್ಯಾಪ್ ಡೀಲ್ ಆಪ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಲೊಕೇಶನ್ ಡೇಟಾ ಮೂಲಕ ನಿಮ್ಮ ಏರಿಯಾದಲ್ಲಿ ಹಣ ಲಭ್ಯತೆ ಬಗ್ಗೆ ಆಪ್ ಮಾಹಿತಿ ಕಲೆ ಹಾಕುತ್ತದೆ. ಬಳಿಕ ನಿಮಗೆ ಪುಶ್ ನೋಟಿಫಿಕೇಶನ್ ಮತ್ತು ಎಸ್ಎಂಎಸ್ ನೋಟಿಫಿಕೇಶನ್ ಬರಲಿದೆ. ಬಳಿಕ ಾರ್ಡರ್ ಪೇಜ್ ಡಿಸ್ಪ್ಲೇ ಆಗುತ್ತೆ.
ಈ ಸೇವೆಗಾಗಿ ನೀವು ಫ್ರೀಚಾರ್ಜ್ ಅಥವಾ ಡೆಬಿಟ್ ಕಾರ್ಡ್ ಮೂಲಕ 1 ರೂಪಾಯಿ ಶುಲ್ಕ ಪಾವತಿಸಬೇಕು. ಮರು ದಿನ ಸ್ನ್ಯಾಪ್ ಡೀಲ್ ಎಕ್ಸಿಕ್ಯೂಟಿವ್ಸ್ POS ಮೆಶಿನ್ ಜೊತೆಗೆ ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಕಾರ್ಡ್ ಅನ್ನ POS ಮೆಶಿನ್ನಿನಲ್ಲಿ ಸ್ವೈಪ್ ಮಾಡಿ 2000 ರೂ. ನೋಟು ಪಡೆಯಬಹುದು. ದಿನವೊಂದಕ್ಕೆ 2000 ರೂಪಾಯಿಯ ಒಂದು ನೋಟು ಪಡೆಯಬಹುದು. ಸದ್ಯ, ಬೆಂಗಳೂರು ಮತ್ತು ಗುರುಗ್ರಾಮ್`ನಲ್ಲಿ ಮಾತ್ರ ಈ ಸೇವೆ ಆರಂಭಿಸಲಾಗಿದೆ.

Comments are closed.