ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ವಿಚಿತ್ರ ಆಚರಣೆಗೆ ಮುಂದಾಗಿದ್ದಾರೆ.
ಮಡಕಿಹೊನ್ನಳ್ಳಿ ಗ್ರಾಮದ ಹೊಲದ ನಾಲ್ಕು ಮಂದಿ ಅಯ್ಯಪ್ಪ ಭಕ್ತರು ಗ್ರಾಮದ ಹೊಲದಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರಕ್ಕೆ ನಾಗಾಸಾಧುಗಳ ರೀತಿ ನಗ್ನರಾಗಿ ಪೂಜೆ ಮಾಡುತ್ತಿದ್ದಾರೆ.
ಪೂಜೆ ನಡೆಸುತ್ತಿರುವ ಹೊಲಗಳಿಗೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಇದರಿಂದ ಮುಜುಗರವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.