ಅಂತರಾಷ್ಟ್ರೀಯ

ಯಾಹೂ ಕಂಪನಿಯ 100 ಕೋಟಿ ಖಾತೆಗಳು ಹ್ಯಾಕ್: ದೊಡ್ಡ ಪ್ರಮಾಣದ ಭದ್ರತಾ ಲೋಪ

Pinterest LinkedIn Tumblr

Yahoo-700ಸನ್ನಿವೇಲ್ (ಕ್ಯಾಲಿಫೋರ್ನಿಯಾ, ಅಮೆರಿಕ): ತನ್ನ 1 ಬಿಲಿಯನ್ (100 ಕೋಟಿ) ಮಂದಿಯ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಯಾಹೂ.ಕಾಮ್ ಪ್ರಕಟಿಸಿದೆ. ಕಂಪನಿಯ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಪ್ರಮಾಣದ ಭದ್ರತಾ ಲೋಪ ಇದಾಗಿದ್ದು, ಯಾಹೂ ಕಂಪನಿ ಭದ್ರತಾ ಲೋಪ ವಿಚಾರದಲ್ಲಿ ತನ್ನದೇ ದಾಖಲೆಯನ್ನು ಮುರಿದಂತಾಗಿದೆ.

ಬುಧವಾರ (ಭಾರತದಲ್ಲಿ ಗುರುವಾರ) ಯಾಹೂ ಖಾತೆಗಳು ಹ್ಯಾಕ್ ಆಗಿರುವುದನ್ನು ಬಹಿರಂಗ ಪಡಿಸಲಾಗಿದೆ. 2013ರಲ್ಲಿ ಸಂಭವಿಸಿದ್ದ ಕಂಪನಿಯ ಖಾತೆಗಳ ಹ್ಯಾಕ್ನಿಂದ 500 ಮಿಲಿಯನ್ (50 ಕೋಟಿ) ಮಂದಿ ಖಾತೆದಾರರಿಗೆ ತೊಂದರೆಯಾಗಿತ್ತು.

‘ಇದು ಆಘಾತಕಾರಿ’ ಎಂದು ಗಾರ್ಟ್ನ್ ಇಂಕ್ನ ಭದ್ರತಾ ತಜ್ಞ ಅವಿವಾಹ್ ಲಿಟನ್ ಪ್ರತಿಕ್ರಿಯಿಸಿದ್ದಾರೆ. ಯಾಹೂ ಕಂಪನಿಯಲ್ಲಿ ಸಂಭವಿಸಿರುವ ಎರಡು ಹ್ಯಾಕಿಂಗ್ಗಳೂ ಯಾಹೂ ಸಿಇಒ ಮರಿಸ್ಸಾ ಮೇಯರ್ ಆಡಳಿತಾವಧಿಯಲ್ಲೇ ಸಂಭವಿಸಿವೆ. ಯಾಹೂ ಕಂಪನಿ ತನ್ನ ಡಿಜಿಟಲ್ ಕಾರ್ಯಾಚರಣೆಯನ್ನು ವೆರಿಜೋನ್ ಕಮ್ಯೂನಿಕೇಷನ್ಸ್ಗೆ 4.9 ಬಿಲಿಯನ್ ಡಾಲರ್ ಗಳಿಗೆ ಮಾರಾಟ ಮಾಡಲು ಒಪ್ಪಿತ್ತು. ಆದರೆ ಹ್ಯಾಕಿಂಗ್ ಪರಿಣಾಮವಾಗಿ ಈ ವ್ಯವಹಾರಕ್ಕೆ ಧಕ್ಕೆಯಾಗುವ ಸಂಭವ ಇದೆ ಎಂದು ಭಾವಿಸಲಾಗಿದೆ.

Comments are closed.