ಬೆಂಗಳೂರು: ಮನೆಯಲ್ಲಿ ನಡೆಯುವ ಕೌಟುಂಬಿಕ ಕಲಹಗಳು ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ಕಿರು ಚಿತ್ರವೊಂದರಲ್ಲಿ ತೋರಿಸಲಾಗಿದೆ.
ಚೆನ್ನೈನಲ್ಲಿರುವ ಯುಎಸ್ ರಾಯಭಾರಿ ಕಚೇರಿಯು ’ಸೈಲೆನ್ಸ್ ದಿ ವೈಲೆನ್ಸ್’ ಎಂಬ ಕಿರು ಚಿತ್ರವನ್ನು ತನ್ನ ಫೇಸ್ಬುಕ್ ಪುಟದಲ್ಲಿ ಬಿತ್ತರಿಸಿದೆ.
ಶಾಲೆಯಲ್ಲಿ ಶಿಕ್ಷಕರು ‘ಮೈ ಫ್ಯಾಮಿಲಿ’ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯುವಂತೆ ಮಕ್ಕಳಿಗೆ ಹೇಳಿರುತ್ತಾರೆ. ಬಾಲಕನೊಬ್ಬಳು ತಮ್ಮ ಮನೆಯಲ್ಲಿ ನಡೆದಿದ್ದ ಪೋಷಕರ ಜಗಳವನ್ನು ಪ್ರಬಂಧ ರೂಪದಲ್ಲಿ ಬರೆದಿರುತ್ತಾನೆ
‘ಅಪ್ಪ, ನನ್ನ ಕ್ರಿಕೆಟ್ ಬ್ಯಾಟ್ನಿಂದ ಅಮ್ಮನನ್ನು ಬಡಿದರು, ಅವರು ಹೊಡೆದದ್ದು ಕರಾಟೆ ಪಂಚ್ನಂತೆ ಇತ್ತು ಎಂಬ ಸಾಲಿನಿಂದ ಪ್ರಬಂಧ ಆರಂಭವಾಗುತ್ತದೆ.
ಅಂತಿಮವಾಗಿ ಶಿಕ್ಷಕರು ಪೋಷಕರನ್ನು ಶಾಲೆ ಕರೆಸಿ ಮಕ್ಕಳ ಮುಂದೆ ಜಗಳವಾಡಬೇಡಿ ಎಂಬ ಕಿವಿ ಮಾತು ಹೇಳುತ್ತಾರೆ.