ಕರ್ನಾಟಕ

ಪಾಕಿಸ್ತಾನದ ಧ್ವಜ ಹಿಡಿದು ಫೇಸ್’ಬುಕ್’ನಲ್ಲಿ ಫೋಟೋ

Pinterest LinkedIn Tumblr

pak-finalಧಾರವಾಡ(ಡಿ.12): ಫೇಸ್ ಬುಕ್ ನಲ್ಲಿ ಪಾಕ್ ಧ್ವಜ ಹಿಡಿದ ಫೋಟೋ ಅಪ್ ಲೋಡ್ ಮಾಡಿದ್ದಕ್ಕಾಗಿ ಧಾರವಾಡ ನಗರದ ತೇಜಸ್ವಿ ಬಡಾವಣೆ ಯುವಕನ್ನೊಬ್ಬನ ವಿರುದ್ಧ ದೂರು ದಾಖಲಾಗಿದೆ.
ಅಫ್ತಾಬ್ ತಡಕೋಡ ಎಂಬಾತ ಪಾಕ್ ಧ್ವಜ ಹಿಡಿದ ಭಾವಚಿತ್ರವನ್ನ ಈದ್ ಮಿಲಾದ್ ಹಬ್ಬ ಇರೋ ಹಿನ್ನೆಲೆಯಲ್ಲಿ ಫೇಸ್ಬುಕ್ಕಿಗೆ ಅಪ್ಲೋಡ್ ಮಾಡಿದ್ದಾನೆ. ಇದನ್ನು ತಿಳಿದ ಶ್ರೀರಾಮಸೇನೆ ಕಾರ್ಯಕರ್ತರು ಆ ಯುವಕನ್ನ ವಿರುದ್ದ ಕಿಡಿ ಕಾರಿದ್ದಾರೆ.
ಇನ್ನೂ ಆ ಯುವಕನನ್ನು ಈ ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments are closed.