ಕರ್ನಾಟಕ

ಸಚಿವ ಎಚ್.ವೈ ಮೇಟಿ ರಾಸಲೀಲೆ ಸಿಡಿ ನನ್ನ ಬಳಿ ಇಲ್ಲ, ಆದರೆ ನೋಡಿದ್ದೇನೆ: ಆರ್ ಟಿಐ ಕಾರ್ಯಕರ್ತ

Pinterest LinkedIn Tumblr

metiಬಳ್ಳಾರಿ: ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರು ಸರ್ಕಾರಿ ಕಟ್ಟಡವೊಂದರಲ್ಲಿ ರಾಸಲೀಲೆ ನಡೆಸಿದ್ದು, ಆ ಕಟ್ಟಡ ಯಾವುದು ಎಂದು ತಮಗೂ ಗೊತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಬಳ್ಳಾರಿಯ ಕೆಎಂಎಫ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜಶೇಖರ್ ಅವರು, ಸಚಿವರು ರಾಸಲೀಲೆ ನಡೆಸಿದ ಸಿಡಿ ನನ್ನ ಬಳಿ ಇಲ್ಲ. ಆದರೆ ನಾನು ವಿಡಿಯೋ ನೋಡಿದ್ದೇನೆ ಎಂದರು.
ಇನ್ನು ಸಿಡಿಯಲ್ಲಿ ಏನಿತ್ತು ಎಂದು ವಿವರಿಸಿ ಎಂದು ವರದಿಗಾರರು ಕೇಳಿದಾಗ, ಆ ಸಿಡಿಯಲ್ಲಿರುವ ಸಚಿವರ ರಾಸಲೀಲೆಯ ದೃಶ್ಯ ನೋಡಿದರೆ ನನಗೂ ಬೇಸರವಾಗುತ್ತೆ. ಅಷ್ಟು ಅಸಹ್ಯವಾಗಿದೆ. ಅದನ್ನು ಇಲ್ಲಿ ವಿವರಿಸುವುದು ಅಸಾಧ್ಯ. ಹೀಗಾಗಿ ಅಂತಹ ಸಚಿವರು ನಮಗೆ ಬೇಡ. ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಮನವಿ ಮಾಡಿದರು.
ನಾನು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಉತ್ತಮ ಸಮಾಜಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಸಚಿವ ಮೇಟಿ ಅವರ ರಾಸಲೀಲೆ ಪ್ರಕರಣ ಸಂಬಂಧ ಮೊದಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ವರದಿ ಸಲ್ಲಿಸುತ್ತೇನೆ. ನಂತರ ಎಐಸಿಸಿಗೂ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಗೃಹ ಸಚಿವ ಪರಮೇಶ್ವರ ಅವರ ಭೇಟಿಗೂ ಅವಕಾಶ ಕೋರಿದ್ದು, ಒಂದು ವೇಳೆ ಅವರು ಅವಕಾಶ ನೀಡಿದರೆ ಭೇಟಿಯಾಗವುದಾಗಿ ರಾಜಶೇಖರ್ ಹೇಳಿದ್ದಾರೆ.
ಇದೇ ವೇಳೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಅವರು ಸಹ ಒಬ್ಬ ದಕ್ಷ್ಯ ಅಧಿಕಾರಿಯಾಗಿದ್ದು, ನನಗೆ ಜೀವ ಬೇದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.
ರಾಜಶೇಖರ್ ಅವರು ನಿನ್ನೆಯಷ್ಟೇ ಸಚಿವರ ರಾಸಲೀಲೆ ನಡೆಸಿದ ಸಿಡಿ ಬಿಡುಗಡೆ ಮಾಡದಂತೆ ಅವರ ಬೆಂಬಲಿಗರು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಜಶೇಖರ್‌ಗೆ ಬೆದರಿಕೆ ಒಡ್ಡಿದ ವ್ಯಕ್ತಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರ ಹೆಸರು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಸಾರವಾದ ಆಡಿಯೋದಲ್ಲಿ ಕೇಳಿ ಬಂದಿದೆ. ಬೇಕಾದ್ರೆ ಹಣ ತೆಗೊಳ್ಳಿ ಸಿಡಿ ಬಿಡುಗಡೆ ಮಾಡಬೇಡಿ. ಮಾಡಿದ್ರೆ ನಿಮಗೆ ನಿಮ್ಮನೆಯವ್ರಿಗೆ ಚೆನ್ನಾಗಿರಲ್ಲ ಎಂದು ಬೆದರಿಕೆ ಒಡ್ಡಲಾಗಿದೆ.
ಸಹಾಯ ಯಾಚಿಸಿ ಬಂದ 24 ರ ಹರೆಯದ ಯುವತಿಯೊಂದಿಗೆ 70 ರ ಹರೆಯದಲ್ಲಿರುವ ಮೇಟಿ ಅವರು ಸೆಕ್ಸ್‌ ನಡೆಸಿದ್ದು ಇದನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

Comments are closed.