ಕರ್ನಾಟಕ

ಕೊಕೈನ್ ಮಾರಾಟ: ನೈಜೀರಿಯನ್ ಪ್ರಜೆ ಬಂಧನ

Pinterest LinkedIn Tumblr

naijiriyanಬೆಂಗಳೂರು,ಡಿ.5-ಮಾದಕವಸ್ತು ಕೊಕೈನ್ ಅನ್ನು ಮಾರಾಟಮಾಡುತ್ತಿದ್ದ ನೈಜೀರಿಯಾದ ಆರೋಪಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಒಹಪ್ಯಾ ನಗರದ ಕಾಲು ಒಕ್ಯಾ ಉದೆ(37)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ 9 ಗ್ರಾಂ ತೂಕದ ಕೊಕೈನ್,4 ಮೊಬೈಲ್‍ಗಳು ಹಾಗೂ 2 ಸಾವಿರ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ವಿ.ಶರತ್‍ಚಂದ್ರ ಅವರು ತಿಳಿಸಿದ್ದಾರೆ.
ಆರೋಪಿಯು ಫ್ರೇಜರ್ ಟೌನ್‍ನ ಕ್ಲೇವ್ ಲ್ಯಾಂಡ್ ರಸ್ತೆಯ ಸೆಂಟ್ ಪ್ರಾನ್ಸಿಸ್ ಕ್ಸೇವಿಯರ್ ಗಲ್ರ್ಸ್ ಹೈ ಸ್ಕೂಲ್ ಕಾಂಪೌಂಡ್ ಬಳಿ ಕೊಕೈನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಮಾದಕ ವಸ್ತು ಕೊಕೈನ್ ನನ್ನು ಬಾಂಬೆಯಿಂದ ತಮಗೆ ಪರಿಚಯವಿರುವ ವ್ಯಕ್ತಿ ಕಡೆಯಿಂದ ಗ್ರಾಂ ಗೆ 5 ಸಾವಿರದಂತೆ ತಂದು ಅದನ್ನು ಚಿಕ್ಕ ಚಿಕ್ಕ ಪ್ಯಾಕ್ ಮಾಡಿ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ವಿಚಾರಣೆಯಲ್ಲಿ ತಿಳಿಸಿದ್ದಾನೆ.ಆರೋಪಿಯ ವಿರುದ್ದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.