ಕರ್ನಾಟಕ

ಚಿಲ್ಲರೆಗಾಗಿ 50, 100ರ ನೋಟು ಪಡೆಯುವಾಗ ಮೋಸ ಹೋಗದಿರಿ

Pinterest LinkedIn Tumblr

Udp_Kotanote_Bank (2)ಮಂಡ್ಯ: ದೇಶದಲ್ಲಿ ಐನೂರು, ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆದ ಬಳಿಕ ಸೃಷ್ಠಿಯಾದ ಚಿಲ್ಲರೆ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಐವತ್ತು, ನೂರು ರೂಪಾಯಿ ನೋಟುಗಳನ್ನು ನಕಲು ಮಾಡಿ ಜನರನ್ನು ವಂಚಿಸುತ್ತಿರುವುದು ಮಂಡ್ಯದಲ್ಲಿ ಪತ್ತೆ ಆಗಿದೆ.

ಈ ರೀತಿಯ ನಕಲಿ ನೋಟುಗಳು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಜನರು ಚಿಲ್ಲರೆಗಾಗಿ ಪರದಾಡುತ್ತಿರುವುದನ್ನೇ ದುರುಪಯೋಗ ಪಡಿಸಿಕೊಂಡಿರೋ ಕೆಲ ಕಳ್ಳರು, ಐವತ್ತು ಮತ್ತು ನೂರು ರೂಪಾಯಿಯನ್ನು ನಕಲು ಮಾಡಿ ಅಮಾಯಕ ಜನರಿಗೆ ಕೊಡುವ ಮೂಲಕ ಮೋಸ ಮಾಡ್ತಿದ್ದಾರೆ. ಈ ಮೋಸವನ್ನು ಇದೀಗ ಸಾರ್ವಜನಿಕರೇ ಪತ್ತೆ ಹೆಚ್ಚಿದ್ದಾರೆ.

ನೋಟ್ ಬ್ಯಾನ್ ಆದ ನಂತರ ಜನರಿಗೆ ಎರಡು ಸಾವಿರ ಮುಖಬೆಲೆಯ ನೋಟನ್ನು ಬ್ಯಾಂಕಿನಿಂದ ನೀಡಲಾಗುತ್ತಿದೆ. ಆದರೆ ಎರಡು ಸಾವಿರ ರೂಪಾಯಿಗೆ ಚಿಲ್ಲರೆ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕೆಲ ಕಿಡಿಗೇಡಿಗಳು ಚಿಲ್ಲರೆ ಕೊಡುವ ನೆಪದಲ್ಲಿ ನೂರು ಮತ್ತು ಐವತ್ತು ರೂಪಾಯಿ ಮುಖಬೆಲೆಯ ಕಲರ್ ಜೆರಾಕ್ಸ್ ನೋಟ ಅನ್ನು ಹಂಚಿಕೆ ಮಾಡ್ತಿದಾರೆ.

ಈ ಕಳ್ಳ ದಂಧೆ ರಾತ್ರಿ ವೇಳೆಯೇ ಹೆಚ್ಚಾಗಿ ನಡೆಯುತ್ತಿದೆ. ಆದರಿಂದ ಪೊಲೀಸರು ಈ ಕಳ್ಳ ದಂಧೆಗೆ ಕಡಿವಾಣ ಹಾಕುವ ಮೂಲಕ ಅಮಾಯಕರಿಗೆ ಆಗ್ತಿರೋ ಅನ್ಯಾಯ ತಡಿಬೇಕು ಅಂತಾ ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments are closed.