ಮಂಡ್ಯ: ಸಾಲ ಮಾಡಿ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ ಅವರ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವಂತೆ ನಮ್ಮ ಸಾಲವನ್ನೂ ಮನ್ನಾ ಮಾಡಿ ಎಂದು ಮಂಡ್ಯದ ರೈತರು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೇದೊಡ್ಡಿ ಗ್ರಾಮದ ರೈತ ಮಹಿಳೆ ಸುನಂದಮ್ಮ ಮತ್ತು ಅವರ ಮಗ ಸುಧಾಕರ್ ಅವರು ಶಿವಪುರ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರಿಗೆ ಅರ್ಜಿ ಸಲ್ಲಿಸಿದ್ದಾರೆ.
‘ಟ್ರ್ಯಾಕ್ಟರ್ ಸಾಲ, ರೇಷ್ಮೆ ಸಾಲ, ಸಾಲದ ಮೇಲಿನ ಬಡ್ಡಿ ಸೇರಿ ₹ 7 ಲಕ್ಷಕ್ಕೂ ಹೆಚ್ಚು ಬಾಕಿ ಇದೆ. ಈ ಸಾಲವನ್ನು ಮನ್ನಾ ಮಾಡಿ’ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.