ಕರ್ನಾಟಕ

ಹಜ್ ಯಾತ್ರೆಗೆ ಸಹಾಯಧನವಿಲ್ಲ: ರೋಷನ್ ಬೇಗ್

Pinterest LinkedIn Tumblr

220px-roshan_baigಬೆಳಗಾವಿ: ಹಜ್ ಯಾತ್ರೆಗೆ ರಾಜ್ಯ ಸರಕಾರದಿಂದ ಯಾವುದೇ ಸಹಾಯಧನ ನೀಡುತ್ತಿಲ್ಲ. ಬದಲಾಗಿ ಹಜ್ ಸಮಿತಿಯ ನಿರ್ವಹಣೆಗೆ ಅನುದಾನ ನೀಡುತ್ತಿದೆ ಎಂದು ಸಚಿವ ರೋಷನ್‌ಬೇಗ್ ಸ್ಪಷ್ಟಪಡಿಸಿದ್ದಾರೆ.

ಶಾಸಕ ಉಮೇಶ ಕತ್ತಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಹಜ್ ಯಾತ್ರೆಗೆ ಸತತ ನಾಲ್ಕು ವರ್ಷ ಅರ್ಜಿ ಸಲ್ಲಿಸಿ ಅವಕಾಶ ಸಿಗದೇ ಇದ್ದವರನ್ನು ಲಾಟರಿ ವ್ಯವಸ್ಥೆಯ ಬದಲಾಗಿ ನೇರವಾಗಿ ಆಯ್ಕೆಗೊಳ್ಳುವ ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ಇನ್ನೂ ರಾಜ್ಯದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಯಾವುದೇ ಸಹಾಯಧನ ನೀಡುತ್ತಿಲ್ಲ. ಬದಲಾಗಿ ಯಾತ್ರಿಗಳ ಕ್ಯಾಂಪ್ ಆಯೋಜನೆ ಹಾಗೂ ಹಜ್ ಸಮಿತಿಯ ನಿರ್ವಹಣೆಗೆ ರಾಜ್ಯ ಸರಕಾರದಿಂದ ಸಹಾಯಧನ ನೀಡಲಾಗುತ್ತಿದೆ ಎಂದು ಸಚಿವ ರೋಷನ್‌ಬೇಗ್ ಸಮಜಾಯಿಸಿ ನೀಡಿದರು.

Comments are closed.