ರಾಷ್ಟ್ರೀಯ

82,500 ಎಟಿಎಂಗಳಲ್ಲಿ ಹೊಸ 2000 ಮತ್ತು 500ರ ನೋಟ್ ಲಭ್ಯ!

Pinterest LinkedIn Tumblr

2000-rs-new-note-vertನವದೆಹಲಿ: ಹೊಸ 2000 ಹಾಗೂ 500 ರುಪಾಯಿ ನೋಟ್ ಗಳಿಗೆ ಹೊಂದಾಣಿಕೆಯಾಗುವಂತೆ ದೇಶಾದ್ಯಂತ ಒಟ್ಟು 82,500 ಎಟಿಎಂಗಳನ್ನು ಸರಿಪಡಿಸಲಾಗಿದ್ದು, ಈ ಎಲ್ಲಾ ಎಟಿಎಂಗಳಲ್ಲೂ ಹೊಸ ನೋಟ್ ಗಳ ಲಭ್ಯವಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಒಟ್ಟು 2.2ಲಕ್ಷ ಎಟಿಎಂಗಳಿದ್ದು, ಆ ಪೈಕಿ ನಿನ್ನೆ ಸಂಜೆಯವರೆಗೆ 82,500 ಎಟಿಎಂಗಳನ್ನು ಹೊಸ ನೋಟ್ ಗಳಿಗೆ ಹೊಂದಾಣಿಕೆಯಾಗುವಂತೆ ಸರಿಪಡಿಸಲಾಗಿದೆ. ಈ ಸಂಬಂಧ ಸರ್ಕಾರ ರಚಿಸಿದ ವಿಶೇಷ ಟಾಸ್ಕ್ ಫೋರ್ಸ್ ನಿರ್ದೇಶನದಂತೆ ಈ ಎಲ್ಲಾ ಎಟಿಎಂಗಳನ್ನು ಸಿದ್ಧಪಡಿಸಲಾಗಿದೆ ಎಂದು ಕ್ಯಾಶ್ ಲಾಜಿಸ್ಟಿಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ರಿತುರಾಜ್ ಸಿನ್ಹಾ ಅವರು ಹೇಳಿದ್ದಾರೆ.
ಆರ್ ಬಿಐ ಡೆಪ್ಯೂಟಿ ಗರ್ವನರ್ ಎಸ್ಎಸ್ ಮುಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್ ಸಲಹೆಯಂತೆ ಗ್ರಾಮೀಣ ಪ್ರದೇಶದ ಎಟಿಎಂಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ನೋಟ್ ಗಳಿಗೆ ಹೊಂದಾಣಿಕೆಯಾಗುವಂತೆ ನಿತ್ಯ 12 ಸಾವಿರದಿಂದ 14 ಸಾವಿರದವರೆಗೆ ಎಟಿಎಂಗಳನ್ನು ಸರಿಪಡಿಸಲಾಗುತ್ತಿದೆ ಎಂದು ಸಿನ್ಹಾ ಅವರು ಹೇಳಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರ ಹಾಗೂ ನಕಲಿ ನೋಟ್ ಗಳಿಗೆ ಕಡಿವಾಣ ಹಾಕಲು 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟ್ ಗಳನ್ನು ರದ್ದು ಮಾಡುವುದಾಗಿ ಘೋಷಿಸಿದ್ದರು. ಅಂದಿನಿಂದ ಜನ ಹಣ ವಿನಿಮಯಕ್ಕಾಗಿ ಹಾಗೂ ಹಳೆ ನೋಟ್ ಗಳನ್ನು ಜಮೆ ಮಾಡುವುದಕ್ಕಾಗಿ ಪರದಾಡುತ್ತಿದ್ದಾರೆ.

Comments are closed.