ಕರ್ನಾಟಕ

ಕಡಿಮೆ ಅವಧಿಯಲ್ಲಿ ಹಣ ದ್ವಿಗುಣಗೊಳಿಸುವ ಭರವಸೆ ಕೊಟ್ಟು 8 ಸಾವಿರ ಮಂದಿಗೆ ವಂಚನೆ

Pinterest LinkedIn Tumblr

New_Nuberig_noteಬಳ್ಳಾರಿ: ಕಡಿಮೆ ಅವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸಿ ಹಿಂದಿರುಗಿಸುವುದಾಗಿ ಪೊಲೀಸರು ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಸರಕಾರಿ ನೌಕರರಿಂದ ಒಟ್ಟು 14 ಕೋಟಿ ರು. ಗೂ ಅಧಿಕ ಹಣ ಸಂಗ್ರಹಿಸಿ ವಂಚನೆ ಮಾಡಿದವನನ್ನು ಕೌಲ್‌ ಬಜಾರ್ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಮೇಶ್ ಅಲಿಯಾಸ್ ಸುರೇಂದ್ರನಾಥ್ ಕಳೆದ ಮೇ ತಿಂಗಳಿಂದ ವಿದ್ಯಾನಗರದಲ್ಲಿ ‘ಬೆಸ್ಟ್ ಚಾಯ್ಸ್ ಅಡ್ವಟೈಸಿಂಗ್’ ಕಂಪನಿ ಆರಂಭಿಸಿದ್ದ. ಹಣ ನೀಡುವ ಜನರಿಗೆ ಒಂದು ವಾರ ಇಲ್ಲ 10 ದಿನದಲ್ಲಿ ದ್ವಿಗುಣ ಮೊತ್ತ ಮರಳಿ ನೀಡುವುದಾಗಿ ಹೇಳಿದ್ದ. ಜನರನ್ನು ನಂಬಿಸಲು ಹಣ ಕೊಟ್ಟವರಿಗೆ ಎರಡು ಪಟ್ಟು ಹಣವನ್ನೂ ನೀಡಿದ್ದ. ಇದಕ್ಕೆ ಸ್ಥಳೀಯ ರೌಡಿಗಳು ಮತ್ತು ರಾಜಕೀಯ ಪಕ್ಷದ ನಾಯಕನ ಬೆಂಬಲವೂ ಇತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೇ ನಂಬಿ ಯುವ ಜನತೆ ಮತ್ತು ಪೊಲೀಸರು ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಜನ 14 ಕೋಟಿ ರು. ಗೂ ಹೆಚ್ಚು ಹಣ ನೀಡಿದ್ದರು. ಈ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮ ದವರ ಮೇಲೆ ಹಲ್ಲೆ ಮಾಡಿದ್ದ ವಾಯುಗುಂಡ್ಲ ರಮೇಶ್ ಮತ್ತು ರಾಮಕೃಷ್ಣ ಅಲಿಯಾಸ್ ಚಿಟ್ಟಿಬಾಬು, ಗೋವರ್ಧನ್ ಅಲಿಯಾಸ್ ಸುಬ್ಬರಾವ್ ಹಾಗೂ ಕುಮಾರಿ ಹಾರಿಕ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಪೊಲೀಸರು ವಾಯುಗುಂಡ್ಲ ರಮೇಶ್‌‌ನನ್ನು ಬಂಧಿಸಿದ್ದು, 5 ಲಕ್ಷ 83 ಸಾವಿರ ರು. ನಗದು ಮತ್ತು 1 ಲಕ್ಷ ರು. ಬೆಲೆ ಬಾಳುವ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆ ಕುರಿತು ಈಗಾಗಲೇ ಹೈದರಾಬಾದ್, ತಿರುಪತಿಯಲ್ಲೂ ರಮೇಶ್ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.