ಕರ್ನಾಟಕ

ನಾಲ್ವರು ನಕ್ಸಲರು ಪೊಲೀಸರಿಗೆ ಶರಣು: ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ

Pinterest LinkedIn Tumblr

naxal-finalಚಿಕ್ಕಮಗಳೂರು: ನಕ್ಸಲ್‌ ಚಟುವಟಿಕೆ ಮೂಲಕ ಒಂದೂವರೆ ದಶಕದಿಂದ ಭೂಗತರಾಗಿದ್ದು, ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿದ್ದ ನೀಲಗುಳಿ ಪದ್ಮನಾಭ ಅಲಿಯಾಸ್‌ ಪರಶುರಾಮ ಮತ್ತು ಆತನ ಪತ್ನಿ ಭಾರತಿ ಹಾಗೂ ರಾಜು ಮತ್ತು ಆತನ ಪತ್ನಿ ರಿಜ್ವಾನ್‌ ಬೇಗಮ್‌ ಈ ನಾಲ್ಕು ಮಂದಿ ನಕ್ಸಲರು ಸೋಮವಾರ ಪೊಲೀಸರಿಗೆ ಶರಣಾದರು. ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿ, ಸಮಾಜದ ಮುಖ್ಯವಾಹಿನಿಗೆ ಸೇರಿದರು.

ಸರ್ಕಾರದ ಉನ್ನತಾಧಿಕಾರ ಸಮಿತಿ ಸದಸ್ಯ ಎ.ಕೆ. ಸುಬ್ಬಯ್ಯ, ಶಾಂತಿಗಾಗಿ ನಾಗರಿಕ ವೇದಿಕೆಯ ಗೌರಿ ಲಂಕೇಶ್‌, ವಕೀಲ ಕೆ.ಪಿ. ಶ್ರೀಪಾಲ್‌ ಅವರ ಸಮ್ಮುಖದಲ್ಲಿ ನಾಲ್ವರು ಶರಣಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಉಪಸ್ಥಿತರಿದ್ದರು.

ಈ ನಾಲ್ವರು ಕಳೆದ ಒಂದೂವರೆ ದಶಕದಿಂದ ಭೂಗತರಾಗಿದ್ದು, ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೊಲೀಸ್‌ಠಾಣೆ ವ್ಯಾಪ್ತಿಯ ಬರ್ಕಣದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪದ್ಮನಾಭ ತೀವ್ರಗಾಯಾಗೊಂಡು ಪರಾರಿಯಾಗಿದ್ದ.

ನೀಲಗುಳಿ ಪದ್ಮನಾಭ ಅಲಿಯಾಸ್‌ ಪರಶುರಾಮ ಮತ್ತು ಆತನ ಪತ್ನಿ ಭಾರತಿ ಹಾಗೂ ರಿಜ್ವಾನ್‌ ಬೇಗಮ್‌ ಈ ಮೂವರ ವಿರುದ್ಧ ಜಿಲ್ಲೆಯ ಶೃಂಗೇರಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

Comments are closed.