ಕರ್ನಾಟಕ

ರಾಜ್ಯದಲ್ಲೂ 1 ಕೆಜಿ ಉಪ್ಪು 80ರಿಂದ 200 ರೂ.ಗೆ ಮಾರಾಟವಾಯ್ತು!

Pinterest LinkedIn Tumblr

salt_photo_1ಬೆಂಗಳೂರು/ಕಲಬುರಗಿ: ಉತ್ತರ ಪ್ರದೇಶದಲ್ಲಿ ಉಪ್ಪಿನ ಅಭಾವದ ವದಂತಿ ರಾಜ್ಯಕ್ಕೂ ತಟ್ಟಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಉಪ್ಪಿನ ದರದಲ್ಲಿ ಭಾರೀ ಏರಿಕೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹೆಚ್ಚು ದರ ಪಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಸಾಮಾನ್ಯ ದರದಲ್ಲೇ ಉಪ್ಪು ಮಾರಾಟವಾಗುತ್ತಿದೆ.

ಬೆಂಗಳೂರಲ್ಲೇನಾಯ್ತು?: ನಗರದ ಕೆಲವೆಡೆ 1 ಕೆಜಿಗೆ 10 ರೂಪಾಯಿ ಏರಿಕೆಯಾಗಿದ್ದು, 10 ರೂ. ಇದ್ದ ಉಪ್ಪು ಈಗ 20 ರೂಪಾಯಿಗೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಏಕಾಏಕಿ ಡಿಮ್ಯಾಂಡ್ ಅದ್ರಿಂದ ದರ ಏರಿಕೆ ಎಂದು ವ್ಯಾಪಾರಿಗಳು ಮಾಹಿತಿ ನೀಡುತ್ತಿದ್ದರೂ, ಈ ಮಾಹಿತಿ ಸುಳ್ಳು ಎಂದು ಬಹಿರಂಗವಾಗಿದೆ. ಕಾರಣ ಇಂದು ಮಧ್ಯಾಹ್ನ ಕೇಂದ್ರ ಹಣಕಾಸು ಸಚಿವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ದೇಶದಲ್ಲಿ ಉಪ್ಪಿನ ಅಭಾವ ಇಲ್ಲ. ಇದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜಾಪುರದಲ್ಲಿ ಕೆಜಿಗೆ 80: ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನಲ್ಲಿ ಉಪ್ಪಿಗಾಗಿ ಜನ ಮುಗಿ ಬಿದ್ದರು. ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣದಲ್ಲಿ ಕೆಜಿ ಉಪ್ಪು 80 ರೂಪಾಯಿಗೆ ಮಾರಾಟವಾದರೆ, ಸಿಂದಗಿ ತಾಲೂಕಿನ ಕೆಲ ಭಾಗಗಳಲ್ಲಿ 90 ರೂಪಾಯಿಗೆ ಕೆಜಿ ಉಪ್ಪನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು.

Comments are closed.