ಕರ್ನಾಟಕ

ಮೋಡ ಬಿತ್ತನೆ ಅವಶ್ಯಕ

Pinterest LinkedIn Tumblr

modaಬೆಂಗಳೂರು, ನ. ೧೨- ಬರದಿಂದ ಬಳಲುತ್ತಿರುವ ರಾಜ್ಯದ ಪರಿಸ್ಥಿತಿ ನಿವಾರಣೆಗೆ ಮೋಡ ಬಿತ್ತನೆಯಂತಹ ವೈಜ್ಞಾನಿಕ ಪರಿಹಾರವನ್ನು ರಾಷ್ಟ್ರೀಯ ನೀರು ನಿರ್ವಹಣೆ ಯೋಜನೆ ಅಂಗವಾಗಿ ಅಳವಡಿಸಿಕೊಳ್ಳುವುದು ತುರ್ತು ಅಗತ್ಯ ಎಂದು ಖ್ಯಾತಿ ಕ್ಲೈಮೆಟ್ ಮಾಡಿಫಿಕೇಶನ್ ಕನ್ಸಲ್‌ಟೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕೋಳಿವಾಡ ತಿಳಿಸಿದರು.
ಭಾರತದ ಕೃಷಿ ವಲಯ ಬಹುತೇಕ ಮುಂಗಾರು ಮಳೆಯನ್ನು ಅವಲಂಬಿಸಿದೆ. ಭಾರತದ ಆರ್ಥಿಕತೆಯಲ್ಲಿ ಕೃಷಿ ಪಾತ್ರ ಬಹುಮುಖ್ಯವಾಗಿದೆ. ದೇಶದ ಶೇ.70ಕ್ಕಿಂತಲೂ ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ಮುಂಗಾರು ಮಾರುತಗಳ ಆರ್ಥಿಕತೆ ಎಂದೇ ವಿವರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈಜ್ಞಾನಿಕ ಮೋಡ ಬಿತ್ತನೆ ಅಭಿವೃದ್ಧಿ ರಾಷ್ಟ್ರಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಆದರೆ ಭಾರತದಲ್ಲಿ ಈ ಪ್ರಕ್ರಿಯೆ ತೀರಾ ಹಿಂದುಳಿದಿದೆ. ಮೋಡ ಬಿತ್ತನೆಗೆ ಸರ್ಕಾರ ಹೆಚ್ಚು ಗಮನಹರಿಸಬೇಕಾಗಿದೆ. ಈ ಮೂಲಕ ಬರದ ಸಂಕಷ್ಟದಿಂದ ರೈತರನ್ನು ಮುಕ್ತಿಗೊಳಿಸುವುದರೊಂದಿಗೆ ರಾಷ್ಟ್ರದ ಆರ್ಥಿಕತೆ ಅಭಿವೃದ್ಧಿಗೊಳಿಸಬೇಕೆಂದು ತಿಳಿಸಿದರು.
ಆಲಿಕಲ್ಲು ಮಳೆಯಿಂದಾಗುವ ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡುತ್ತಿದೆ. ಆದರೆ, ಈ ಹಾನಿಯ ನಷ್ಟದ ಪರಿಹಾರಕ್ಕಾಗಿ ಬಿಡುಗಡೆ ಮಾಡುವ ಹಣದ ಮೊತ್ತಕ್ಕೆ ಹೋಲಿಸಿದರೆ ಮೋಡ ಬಿತ್ತನೆಗೆ ಬೇಕಾಗುವ ಮೊತ್ತ ತೀರಾ ಕಡಿಮೆ ಎಂದ ಅವರು, ರಾಜ್ಯದ ರೈತರ ಸಮಸ್ಯೆಗೆ ಮೋಡ ಬಿತ್ತನೆ ರಾಮಬಾಣದಂತಹ ಪರಿಹಾರ. ಅಸಮಾನ ಮಳೆ ಹಂಚಿಕೆಯನ್ನು ಮೋಡ ಬಿತ್ತನೆಯ ಮೂಲಕ ಕಡಿತಗೊಳಿಸಲು ಸಾಧ್ಯ ಎಂದು ತಿಳಿಸಿದರು.
ವಿಜ್ಞಾನಿಗಳ ಮಾಹಿತಿಯನ್ವಯ ಮೋಡ ಬಿತ್ತನೆಯನ್ನು ಯೋಜನಾ ಬದ್ಧವಾಗಿ ನಡೆಸಿದರೆ ಅದರ ಪರಿಣಾಮವನ್ನು ಸ್ಪಷ್ಟವಾಗಿ ಅರಿಯಬಹುದು. ಈ ನಿಟ್ಟಿನಲ್ಲಿ ಯುಪಿಎ ಸರ್ಕಾರ ಯುಎ‌ಇ ಪ್ರೋಗಾಮ್ ಫಾರ್ ರೈನ್ ಎನಾನ್ಸ್‌ಮೆಂಟ್ ಸೈನ್ಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಂಪನಿ ವತಿಯಿಂದ ಅಮೆರಿಕ ಕಂಪನಿ ಸಹಯೋಗದೊಂದಿಗೆ ಮೋಡ ಬಿತ್ತನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ 70 ಮೋಡ ಬಿತ್ತನೆ ಗುತ್ತಿಗೆಗಳನ್ನು ಸಂಸ್ಥೆ ಪೂರೈಸಿರುವುದಾಗಿ ಅವರು ತಿಳಿಸಿದರು.

Comments are closed.