ಚಿಕ್ಕಮಗಳೂರು: ದೇಶಾದ್ಯಂತ ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಇನ್ನೂ ಎಷ್ಟೋ ಜನ ನೋಡೇ ಇಲ್ಲ. ಆದರೆ ಖೋಟಾ ನೋಟುಗಳ ಮಾರುಕಟ್ಟೆಯಲ್ಲಿ ರಾರಾಜಿಸ್ತಿವೆ. ಇಂದು ಬೆಳಗಿನ ಜಾವ ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರಿ ಅಶೋಕ್ ಎಂಬುವರಿಗೆ ಈ ನೋಟು ಸಿಕ್ಕಿದೆ.
ಅಶೋಕ್ ಎಂಬವರು ಬೆಳಗ್ಗೆ ಟಿ ಕುಡಿಯಲು ಹೋದಾಗ ಅವರ ಕೆಲಸದ ಹುಡುಗನ ಬಳಿ ಯಾರೋ ಈ ನೋಟನ್ನು ನೀಡಿ ಹೋಗಿದ್ದಾರೆ. ಅಶೋಕ್ ಬಂದು ನೋಟು ಮುಟ್ಟಿದ ಕೂಡಲೇ ಇದು ಖೋಟಾ ನೋಟು ಎಂದು ಮನವರಿಕೆಯಾಗಿದೆ.
ಈ ನೋಟಿನ ಬಾರ್ಡರ್ನಲ್ಲಿ ಕತ್ತರಿಯಿಂದ ಕತ್ತರಿಸಿರೋದು ಕಾಣ್ತಿದೆ. ಸೈಡ್ ಎಡ್ಜ್ ನಲ್ಲಿ ಇರಬೇಕಾದ 7 ಗೆರೆಗಳು ಇಲ್ಲ. ಅಲ್ಲದೆ ಅಸಲಿ ನೋಟಿನ ನಾಲ್ಕು ಮೂಲೆಗಳು ಸ್ಪಷ್ಟವಾಗಿದ್ದು, ನಕಲಿ ನೋಟಿನ ಮೂಲೆಗಳು ಅನುಮಾನ ಮೂಡಿಸುವಂತಿದೆ. ಇದೀಗ ಪೊಲೀಸ್ ಠಾಣೆಗೆ ದೂರು ನೀಡಲು ಅಶೋಕ್ ಮುಂದಾಗಿದ್ದಾರೆ.