ಕರ್ನಾಟಕ

ನೋಟು ಮುದ್ರಣ ಠಂಕಶಾಲೆಯಲ್ಲಿ ವಿಭಿನ್ನ ದರ : ಒಂದು ರೂಪಾಯಿ ನೋಟು ಮುದ್ರಣಕ್ಕೆ 1.14 ರೂಪಾಯಿ ದರ

Pinterest LinkedIn Tumblr

one-rupee-note

ಚೆನ್ನೈ: ಭಾರತೀಯ ರಿಸರ್ವ್ ಬ್ಯಾಂಕಿಗೆ ನೋಟು ಮುದ್ರಿಸಿಕೊಡುವ ಎರಡು ಠಂಕಶಾಲೆಗಳು ವಿಭಿನ್ನ ದರ ವಿಧಿಸುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಆರ್ಟಿಐ ಕಾರ್ಯಕರ್ತ ಸುಭಾಶ್ ಅಗರ್ವಾಲ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಆರ್ಬಿಐ ನೀಡಿರುವ ಉತ್ತರದಿಂದ ಈ ಅಂಶ ಬಹಿರಂಗವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯ ಪ್ರೈವೇಟ್ ಲಿಮಿಟೆಡ್ ಎಂಬ ಆರ್ಬಿಐ ಮಾಲಕತ್ವದ ಕಂಪೆನಿ, 10 ಮತ್ತು 20 ರೂಪಾಯಿ ನೋಟುಗಳ ಮುದ್ರಣಕ್ಕೆ 70 ಪೈಸೆ ಹಾಗೂ 96 ಪೈಸೆ ದರ ವಿಧಿಸುತ್ತದೆ. ಸರಕಾರದ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಪಿಂಟಿಂಗ್ ಕಾರ್ಪೊರೇಷನ್ನಲ್ಲಿ ಇದಕ್ಕೆ 1.22 ರೂಪಾಯಿ ಹಾಗೂ 1.216 ಪೈಸೆ ದರ ವಿಧಿಸಲಾಗುತ್ತದೆ.

ಎಸ್ಪಿಎಂಸಿಐಎಲ್ನಲ್ಲಿ ಒಂದು ರೂಪಾಯಿ ನೋಟು ಮುದ್ರಣಕ್ಕೆ 1.14 ರೂಪಾಯಿ ದರ ವಿಧಿಸಲಾಗುತ್ತಿತ್ತು.

ಆದರೆ ಇದೀಗ ಉನ್ನತ ತಂತ್ರಜ್ಞಾನವನ್ನು ಬಳಸಿ ಈ ದರವನ್ನು 78.5 ಪೈಸೆಗೆ ಇಳಿಸಲಾಗಿದೆ. ಅಧಿಕ ವೆಚ್ಚದ ಕಾರಣದಿಂದ 1994ರಲ್ಲಿ ಒಂದು ರೂಪಾಯಿ ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ವೆಚ್ಚ ಕಡಿಮೆಯಾಗಿದೆ ಎಂದು ಆರ್ಬಿಐ ಪ್ರಕಟಿಸಿದೆ.
1994-95ರಲ್ಲಿ ಒಂದು ರೂಪಾಯಿ ನೋಟು ಮುದ್ರಣಕ್ಕೆ 1.48 ರೂಪಾಯಿ ವೆಚ್ಚವಾಗುತ್ತಿತ್ತು. ಈ ವೆಚ್ಚ ಬಳಿಕ 1.14 ರೂಪಾಯಿಗೆ ಇಳಿದಿತ್ತು.

Comments are closed.