ಕರಾವಳಿ

ಮೆದುಳು ನಿಷ್ಕ್ರಿಯಗೊಂಡ ಇಬ್ಬರ ಅಂಗಾಂಗ; 10 ಜನರಿಗೆ ಜೀವದಾನ

Pinterest LinkedIn Tumblr

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯ ಆದ ಇಬ್ಬರ ದೇಹದಿಂದ ತೆಗೆದ ಅಂಗಾಂಗಗಳು 10 ಮಂದಿಯ ಜೀವಕ್ಕೆ ಆಸರೆಯಾಗಲಿವೆ. ಅಂಗಾಂಗಗಳನ್ನು ವಿಶೇಷ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಜೀರೋ ಟ್ರಾಫಿಕ್‌ ಗ್ರೀನ್‌ ಕಾರಿಡಾರ್‌ ಮೂಲಕ ಶನಿವಾರ ಸಾಗಿಸಲಾಯಿತು. ಅನಂತರ ವಿಮಾನದಲ್ಲಿ ಬೆಂಗಳೂರಿಗೆ ಸಾಗಿಸಲಾಯಿತು.

udupi_anganga_dana

ಉಡುಪಿಯ ಪೆರಂಪಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೆಲೇರಿಯನ್‌ ಡಿ’ಸೋಜಾ ಅವರು ನ. 3ರ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ನ. 4ರ ಅಪರಾಹ್ನ 2.30 ಮತ್ತು ರಾತ್ರಿ 9.40ಕ್ಕೆ ಅವರ ಮೆದುಳು ನಿಷ್ಕ್ರಿಯ ಆಗಿರುವುದನ್ನು ವೈದ್ಯರು ಘೋಷಿಸಿದರು. ಅವರ ಕಣ್ಣುಗಳ 2 ಕಾರ್ನಿಯಾ, 2 ಕಿಡ್ನಿ, 1 ಲಿವರ್‌ ಅನ್ನು ತೆಗೆಯಲು ಅವರ ಪತ್ನಿ ಸಮ್ಮತಿ ವ್ಯಕ್ತಪಡಿಸಿದಂತೆ ವೈದ್ಯರು ಪ್ರಕ್ರಿಯೆಗಳನ್ನು ನಡೆಸಿದರು. ಅವರ 1 ಕಿಡ್ನಿಯು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿದ್ದ ವ್ಯಕ್ತಿಗೆ ಹಾಗೂ ಇನ್ನೊಂದು ಕಿಡ್ನಿಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ರವಾನಿಸಿ ಅಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಜೋಡಿಸಲಾಯಿತು. ಲಿವರ್‌ ಅನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ರವಾನಿಸಲಾಯಿತು.

ಬ್ರಹ್ಮಾವರ ಮೂಲದ ಕಿಶೋರ್‌ ಬಿದ್ದು ಗಾಯಗೊಂಡ ನ. 3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನ. 4ರ ಸಂಜೆ 6 ಗಂಟೆಗೆ ಮತ್ತುಮಧ್ಯರಾತ್ರಿ 12ಕ್ಕೆ ಅವರ ಮೆದುಳು ನಿಷ್ಕ್ರಿಯ ಆಗಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಅವರ ಸಹೋದರ, ಸಹೋದರಿಯರು ಅಂಗಾಂಗ ದಾನಕ್ಕೆ ಸಮ್ಮತಿ
ಸೂಚಿಸಿದರು. ಅವರ 2 ಕಣ್ಣುಗಳ ಕಾರ್ನಿಯಾ, 2 ಕಿಡ್ನಿ, 1 ಲಿವರನ್ನು ತೆಗೆಯಲಾಯಿತು. 1 ಕಿಡ್ನಿಯನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿದ್ದ ವ್ಯಕ್ತಿಗೆ, ಇನ್ನೊಂದು ಕಿಡ್ನಿಯನ್ನು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿಗೆ ಹಾಗೂ ಲಿವರ್‌ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಇಬ್ಬರ ದೇಹದೊಳಗಿನ 4 ಕಿಡ್ನಿ, 2 ಲಿವರ್‌, 4 ಕಾರ್ನಿಯಾಗಳನ್ನು ದೇಹದಿಂದ ತೆಗೆಯಲಾಗಿದೆ. ಕಿಡ್ನಿ, ಲಿವರ್‌ ಅನ್ನು ಬೇರೆ ವ್ಯಕ್ತಿಗಳಿಗೆ ಜೋಡಿಸಲಾಯಿತು. ಕಾರ್ನಿಯಾವನ್ನು ಮಣಿಪಾಲ ಆಸ್ಪತ್ರೆಯ ಕಣ್ಣಿನ ಬ್ಯಾಂಕಿನಲ್ಲಿರಿಸಲಾಗಿದೆ ಎನ್ನಲಾಗಿದೆ.

Comments are closed.