ಬೆಳಗಾವಿ: ಮೇಯರ್ ಸರಿತಾ ಪಾಟೀಲ, ಉಪ ಮೇಯರ್ ಸಂಜಯ ಶಿಂದೆ ಮತ್ತು ಶಾಸಕರ ಕಚೇರಿಯ ಬಾಗಿಲುಗಳು ಹಾಗೂ ನಾಮಫಲಕಗಳಿಗೆ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದಿದ್ದಾರೆ.
ಮಸಿ ಬಳಿದು ಪಾಲಿಕೆಯ ಎದುರು ಪ್ರತಿಭಟನೆ ನೆಡೆಸುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
‘ಕನ್ನಡ ವಿರೋಧಿ ಕಾರ್ಯದಲ್ಲಿ ತೊಡಗಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು. ಮೇಯರ್, ಉಪ ಮೇಯರ್ ಮತ್ತು ಬೆಳಗಾವಿ ಶಾಸಕರಿಗೆ ಸರ್ಕಾರ ನೀಡುತ್ತಿರುವ ವಾಹನ ಮತ್ತು ಇತರೆ ಸವಲತ್ತುಗಳನ್ನು ತಕ್ಷಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದ ಕಾರ್ಯಕರ್ತರು ಎಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.