ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಹೊಸದೊಂದು ಟ್ವಿಸ್ಟ್ ಪಡೆದುಕೊಂಡಿದೆ. ಸ್ಥಳೀಯ ಕೆಲವು ಮುಸ್ಲಿಂ ಮುಖಂಡರು ಆರೋಪಿಗಳಿಗೆ ಹಣಕಾಸಿನ ನೆರವು ಕೊಟ್ಟು ಕೇರಳದಲ್ಲಿ ಟ್ರೈನಿಂಗ್ ಪಡೆಯೋಕೆ ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ವಿಚಾರ ಈಗ ಬಹಿರಂಗಗೊಂಡಿದೆ.
ಆರೋಪಿಗಳನ್ನು 15 ದಿನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ಹಂತಕರು ಒಂದೊಂದೇ ವಿಚಾರವನ್ನು ಬಾಯಿಬಿಡುತ್ತಿದ್ದಾರೆ. ಹತ್ಯೆಗೆ ಒಳಗಾದ ರುದ್ರೇಶ್ ಮುಂದಿನ ಕಾರ್ಪೋರೇಷನ್ ಚುನಾವಣೆಯಲ್ಲಿ ಲೋಕಲ್ ಕಾರ್ಪೋರೇಟರ್ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದರು. ಇದು ಸ್ಥಳೀಯ ಮುಖಂಡರಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹಂತಕರಿಗೆ ಆರ್ಥಿಕ ಸಹಾಯ ನೀಡಿ, ಕೇರಳದಲ್ಲಿ ತರಬೇತಿ ಪಡೆದು ಬಂದು ನಂತರ ರುದ್ರೇಶ್ ಅವರನ್ನು ಹತ್ಯೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.