ಕ್ರೀಡೆ

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಸರಣಿ ಜಯ

Pinterest LinkedIn Tumblr

team-indiaವಿಶಾಖಪಟ್ಟಂ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ.
ಐದು ಪಂದ್ಯಗಳ ಪೈಕಿ 2-2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದ್ದ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿತ್ತು. ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 79 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 191 ರನ್ ಗಳ ಅಂತರದಿಂದ ಜಯ ಗಳಿಸಿದೆ.
ಅಮಿತ್ ಮಿಶ್ರಾರ ಸ್ಪಿನ್ ದಾಳಿಗೆ ನ್ಯೂಜಿಲೆಂಡ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದರು. ಐದು ವಿಕೆಟ್ ಪಡೆದ ಮಿಶ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನ್ಯೂಜಿಲೆಂಡ್ ಪರ ಗುಪ್ಟಿಲ್ 0, ಲ್ಯಾಥಮ್ 19, ಕೇನ್ ವಿಲಿಯಮನ್ಸ್ 27, ಟೇಲರ್ 19 ರನ್ ಗಳಿಸಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಅಮಿತ್ ಮಿಶ್ರಾ 5 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ವಿಕೆಟ್ ಪಡೆದಿದ್ದಾರೆ.
ವೈಎಸ್ ರಾಜಶೇಕರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತ್ತು.
ಟೀಂ ಇಂಡಿಯಾ ಪರ ಅಜಿಂಕ್ಯ ರಹಾನೆ 20, ರೋಹಿತ್ ಶರ್ಮಾ 70, ವಿರಾಟ್ ಕೊಹ್ಲಿ 65, ಎಂಎಸ್ ಧೋನಿ 41, ಅಕ್ಷರ್ ಪಟೇಲ್ 24 ಹಾಗೂ ಕೇದರ್ ಜಾದವ್ ಅಜೇಯ 39 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಬೋಲ್ಟ್, ಸೋಧಿ ತಲಾ 2 ವಿಕೆಟ್ ಪಡೆದರೆ, ನೀಶಾಮ್, ಸ್ಯಾಟ್ನರ್ ತಲಾ 1 ವಿಕೆಟ್ ಪಡೆದಿದ್ದಾರೆ.

Comments are closed.