ಅಂತರಾಷ್ಟ್ರೀಯ

ಮೋಜಿಗಾಗಿ ಬೆಂಗಳೂರು ಯುವಕನನ್ನು ಮದುವೆಯಾಗಿ ಪರಾರಿಯಾದ ದುಬೈ ಯುವತಿ

Pinterest LinkedIn Tumblr

dubaiಬೆಂಗಳೂರು: ಮೋಜು-ಮಸ್ತಿ ಮಾಡಲು ಬೆಂಗಳೂರು ಹುಡುಗನನ್ನು ಪ್ರೀತಿಸಿ ಮದುವೆಯಾದ ದುಬೈ ಯುವತಿ ಈಗ ನಾಲ್ಕೇ ತಿಂಗಳಿನಲ್ಲಿ ಬೆಂಗಳೂರು ಬೇಡ ಎಂದು ಹೇಳಿ ದುಬೈಗೆ ತೆರಳಿದ್ದಾಳೆ.

ಟ್ಯಾನಿ ರಸ್ತೆಯ ವೆಂಕಟೇಶಪುರಂ ನಿವಾಸಿ, ಉದ್ಯಮಿ ಮಹಮದ್ ಹುಸೇನ್ 2012 ರಲ್ಲಿ ದುಬೈನಲ್ಲಿ ವಾಸವಿದ್ದ ಶೈಮಾನಿಸಾ ಎಂಬಾಕೆಯ ಜೊತೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಸ್ಕೈಪ್ ಮೂಲಕ ಲವ್ ಆಗಿತ್ತು. ಸತತ ಒಂದು ವರ್ಷಗಳ ಕಾಲ ಪ್ರೀತಿಸಿದ ಜೋಡಿಹಕ್ಕಿಗಳು 2013 ಏಪ್ರಿಲ್ 27 ರಂದು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಪ್ರೀತಿಸಿದ ಹುಡುಗಿಯನ್ನೇ ಮದುವೆ ಆಗಿದ್ದೇನೆ ಎಂದು ಮಹಮದ್ ಹುಸೇನ್‍ಗೆ ಎಲ್ಲೋ ಒಂದು ಹೇಳಲಾರದಷ್ಟು ಖುಷಿಯಾಗಿತ್ತು.

ಆದರೆ ಆ ಸಂತಸ ಬಹಳ ಕಾಲ ಉಳಿಯಲೇ ಇಲ್ಲ. ಯಾಕೆಂದರೆ ಪ್ರೀತಿಸಿ ಮದುವೆಯಾದವಳಿಗೆ ಬೆಂಗಳೂರಿನ ಸಂಸ್ಕೃತಿ ಇಷ್ಟವಿಲ್ಲದ ಕಾರಣ ಪದೇ-ಪದೇ ಗಲಾಟೆ ತೆಗೆದು ಮದುವೆಯಾದ ಐದು ತಿಂಗಳಿನಲ್ಲಿ ಗಂಡನನ್ನ ಬಿಟ್ಟು ದುಬೈಗೆ ಎಸ್ಕೇಪ್ ಆಗಿದ್ದಾಳೆ.

ವಿಶೇಷ ಏನೆಂದರೆ ಶೈಮನಿಸಾ ಈಗಾಗಲೇ ಮೊದಲ ಗಂಡನ ಬಳಿ ಡೈವೋರ್ಸ್ ಪಡೆಯದೆ ಇನ್ನೊಬ್ಬನನ್ನ ಮದುವೆಯಾಗಿದ್ದಾಳಂತೆ. ಜೊತೆಗೆ ಹೊಟ್ಟೆಯಲ್ಲಿದ್ದ ಮಗುವನ್ನೂ ಕೂಡಾ ಗರ್ಭಪಾತ ಮಾಡಿಸಿದ್ದಾಳಂತೆ. ಆದರೆ ಆಕೆ ಇಷ್ಟೆಲ್ಲಾ ಮಾಡಿದ್ದರೂ ಮೊದಲ ಪತಿ ಮಹಮದ್ ಹುಸೇನ್ ಮಾತ್ರ ಆಕೆಗೆ ಎಷ್ಟು ಮದುವೆಯಾದರೂ ಪರ್ವಾಗಿಲ್ಲ. ನಾನು ಆಕೆಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಬೇಕು ಎಂದು ಹಠ ಹಿಡಿದಿದ್ದಾರೆ. ಈಗಾಗಲೇ ಪತ್ನಿಯನ್ನ ಪಡೆಯುವ ಸಲುವಾಗಿ ಮಹಮದ್ ಹುಸೇನ್ ಕಾನೂನು ಹೋರಾಟ ಕೂಡಾ ನಡೆಸ್ತಿದ್ದಾರೆ.

Comments are closed.