ಕರ್ನಾಟಕ

1791 ಕೋಟಿ ರೂಪಾಯಿ ವೆಚ್ಚದ ಸ್ಟೀಲ್ ಫ್ಲೈಓವರ್ ಕಾಮಗಾರಿಗೆ ಗ್ರೀನ್ ಸಿಗ್ನಲ್

Pinterest LinkedIn Tumblr

steel_fly_over

ಬೆಂಗಳೂರು: ಸ್ಟೀಲ್ ಫ್ಲೈಓವರ್ ವಿವಾದ ದಿನೇ ದಿನೇ ಹೆಚ್ಚಾಗ್ತಾ ಇದೆ. ಇವತ್ತು ಕೂಡ ಫ್ಲೈಒವರ್ ಬೇಡವೇ ಬೇಡ ಅಂತಾ ಬಿಜೆಪಿ ಅಪ್ಪಿಕೋ ಚಳವಳಿ ನಡೆಸಿತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಕೊಳ್ಳದ ಬಿಡಿಎ ಇತ್ತ ಯೋಜನೆ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆ.

ದಿನದಿಂದ ದಿನಕ್ಕೆ ವಿರೋಧ ಹೆಚ್ಚಾಗುತ್ತಿದ್ದರೂ ಬಿಡಿಎ ಕ್ಯಾರೇ ಎನ್ನುತ್ತಿಲ್ಲ.ಇದೀಗ ಯೋಜನೆಯ ಕಾಮಗಾರಿ ನಡೆಸೋದಕ್ಕೆ ಎಲ್ಅಂಡ್ ಟಿ ಕಂಪನಿಗೆ ಒಪ್ಪಿಗೆ ಪತ್ರ ನೀಡಿದೆ. ಕಳೆದ ಎರಡು ದಿನಗಳ ಹಿಂದೆ ಪತ್ರ ನೀಡಿರೋ ಬಿಡಿಎ ಟೆಂಡರ್ ಮೊತ್ತ 1791 ಕೋಟಿ ರೂಪಾಯಿಗೆ ಒಪ್ಪಿಗೆ ನೀಡಿದ್ದು, ಪತ್ರ ನೀಡಿದ ದಿನದಿಂದಲೇ ಯೋಜನೆ ಅವಧಿ ಶುರುವಾಗುತ್ತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದೆ.

ಎಲ್ಅಂಡ್ ಟಿ ಕಂಪನಿ ಟೆಂಡರ್ ಮೊತ್ತದ ಶೇಕಡಾ 5% ರಷ್ಟು ಹಣ ಶ್ಯೂರಿಟಿ ನೀಡಿದ ನಂತರ ಮತ್ತೊಂದು ಕರಾರು ಪತ್ರ ಮಾಡಿಕೊಳ್ಳಲಿದಿಯಂತೆ. ಒಟ್ಟಿನಲ್ಲಿ ಈ ಕಡೆ ವಿರೋಧ ಹೆಚ್ಚಾಗುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಡಿಎ ದುಬಾರಿ ಸ್ಟೀಲ್ ಫ್ಲೈಓವರ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಶಂಕುಸ್ಥಾಪನೆಯೊಂದೇ ಬಾಕಿ ಉಳಿದಿದೆ.

Comments are closed.