ಕರ್ನಾಟಕ

ಯುವತಿಯರ ಎದುರು ಗುಪ್ತಾಂಗ ತೋರಿಸಿದ ಕಾಮುಕ ಯುವಕ !

Pinterest LinkedIn Tumblr

231

ಬೆಂಗಳೂರು : ನಗರದ ಕಾಕ್ಸ್‌ಟೌನ್‌ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರ ಎದುರು ಮಂಗಳವಾರ ರಾತ್ರಿ ಮೂವರು ಯುವತಿಯರ ಎದುರು ಯುವಕನೊಬ್ಬ ಪ್ಯಾಂಟ್’ನ ಜಿಪ್ ತೆಗೆದು ಗುಪ್ತಾಂಗ ತೋರಿಸಿ ತೀರಾ ಅಸಭ್ಯವಾಗಿ ವರ್ತಿಸಿದ ಬಗ್ಗೆ ವರದಿಯಾಗಿದೆ.

ರಾತ್ರಿ 10 ಗಂಟೆಯ ವೇಳೆ ಯುವತಿಯರು ಕಾರಿನಿಂದಿಳಿದು ಅಪಾರ್ಟ್‌ಮೆಂಟ್‌ಗೆ ಬರುತ್ತಿದ್ದಂತೆ ಗೇಟ್‌ಎದುರಿಗಿದ್ದ ಯುವಕ ತನ್ನ ಪ್ಯಾಂಟ್’ನ ಜಿಪ್ ತೆಗೆದು ತೀರಾ ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವರ್ತನೆ ಕಂಡು ಫ್ಲ್ಯಾಟ್‌ನೊಳಗೆ ಓಡಿದ ಯುವತಿಯರು ಸಹಾಯಕ್ಕಾಗಿ ಕೂಗಿಕೊಂಡಾಗ ಒಬ್ಟಾಕೆಯ ತಂದೆ ಬಂದಿದ್ದು, ಈ ವೇಳೆ ಕಾಮುಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮರುದಿನ ದೃಶ್ಯಾವಳಿಗ ಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿ ನಗರ ಠಾಣಾ ಪೊಲೀಸರು ಕಾಮುಕನ ಪತ್ತೆಗಾಗಿ ತಂಡ ರಚಿಸಿದ್ದಾರೆ.

Comments are closed.