ಕರ್ನಾಟಕ

ಗಿಡಮೂಲಿಕೆಯಿಂದ ಕಿಡ್ನಿ ಕಲ್ಲು ಸಮಸ್ಯೆ ನಿವಾರಣೆ

Pinterest LinkedIn Tumblr

kidney-stone-main

ಮಂಗಳೂರು: ಮೂತ್ರಪಿಂಡಗಳು ನಮ್ಮ ದೇಹದ ಶೋಧಕಗಳು. ಅಂದರೆ ರಕ್ತದಿಂದ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ವಿಸರ್ಜಿಸುವುದು. ಇದಕ್ಕೆ ಸಾಕಷ್ಟು ನೀರು ಅಗತ್ಯ. ಆದರೆ ನೀರಿನ ಪ್ರಮಾಣ ಕಡಿಮೆಯಾದರೆ ಸಂಗ್ರಹಗೊಂಡ ವಿಷಕಾರಿವಸ್ತುಗಳ ಸಾಂದ್ರತೆ ಹೆಚ್ಚಾಗಿ ಮೂತ್ರಪಿಂಡಗಳು ಅಪಾಯಕ್ಕೆ ಒಳಗಾಗುತ್ತದೆ. ಇದರಲ್ಲಿರುವ ಲವಣಗಳು ಘನೀಕೃತಗೊಂಡು ಚಿಕ್ಕ ಕಲ್ಲು ರೂಪುಗೊಳ್ಳುತ್ತದೆ, ದಿನಗಳೆದಂತೆ ಈ ಕಲ್ಲಿಗೆ ಇನ್ನಷ್ಟು ಲವಣ ಅಂಟಿಕೊಳ್ಳುತ್ತಾ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ. ಆದ್ದರಿಂದ ಮೂತ್ರಪಿಂಡಗಳು ಶೋಧಿಸಿದ ಕಲ್ಮಶಗಳು ಪೂರ್ಣ ಹೊರಹೋಗುವುದು ಅವಶ್ಯ. ಉತ್ತಮ ಆರೋಗ್ಯಕ್ಕೆ ಮೂತ್ರಪಿಂಡಗಳ ಕಾರ್ಯಕ್ಷಮತೆ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ.

ಇದಕ್ಕಾಗಿ ಉತ್ತಮ ಆಹಾರ, ನೀರು ಮತ್ತು ಇತರ ಮೂತ್ರವರ್ಧಕಗಳು ಅಗತ್ಯ. ನಮ್ಮ ಆಹಾರದಲ್ಲಿರುವ ಕೆಲವಾರು ಪೋಷಕಾಂಶಗಳು ಮೂತ್ರವರ್ಧಕವಾಗಿವೆ. ಆದರೆ ಇಂದಿನ ಸಿದ್ಧ ಆಹಾರಗಳ ಸೇವನೆಯಿಂದ ಈ ಪೋಷಕಾಂಶಗಳು ಕಡಿಮೆಯಾಗಿ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೆ ಈ ಕೊರತೆಯನ್ನು ಕೆಲವು ಗಿಡಮೂಲಿಕೆಗಳು ಸಮರ್ಥವಾಗಿ ಪೂರ್ಣಗೊಳಿಸಬಲ್ಲವು.

ಇವುಗಳಲ್ಲಿರುವ ಫೈಟೋನ್ಯೂಟ್ರಿಯೆಂಟುಗಳೆಂಬ ಪೋಷಕಾಂಶಗಳು ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಇವು ನೈಸರ್ಗಿಕವಾಗಿರುವ ಕಾರಣ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆದರೂ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಗಿಡಮೂಲಿಕೆ ಹಾಗೂ ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮುನ್ನ ಇದು ತಮಗೆ ಅಲರ್ಜಿಕಾರಕವೇ ಇಂದು ಪರಿಶೀಲಿಸಿಕೊಂಡೇ ಮುಂದುವರೆಯುವುದು ಅಗತ್ಯ.

ಅಜಮೋದ ಅಥವಾ ಪಾರ್ಸ್ಲೆ (Parsley) ಸೊಪ್ಪು
ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುವ ಪಾರ್ಸ್ಲೆ ಸೊಪ್ಪು ರುಚಿ ಅಥವಾ ಪರಿಮಳದಲ್ಲಿ ಭಿನ್ನವಾಗಿರುತ್ತದೆ. ಇವು ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳನ್ನು ಹೊರಹಾಕಲು ನೆರವಾಗುತ್ತದೆ. ಇದಕ್ಕಾಗಿ ಪಾರ್ಸ್ಲೆ ಸೊಪ್ಪನ್ನು ಕೊಂಚ ಉಗುರುಬೆಚ್ಚನೆಯ ನೀರಿನೊಂದಿಗೆ ಮಿಕ್ಸಿಯಲ್ಲಿ ಗೊಟಾಯಿಸಿ ಶೋಧಿಸಿ ದಿನದಲ್ಲಿ ಹಲವು ಕಪ್ ಕುಡಿಯುವ ಮೂಲಕ ಮೂತ್ರಪಿಂಡಗಳು ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಈ ಸೊಪ್ಪನ್ನು ಸಾಲಾಡ್ ಜೊತೆ ಊಟದಲ್ಲಿ ಸೇವಿಸುವುದೂ ಉತ್ತಮ.

ginger

ಹಸಿಶುಂಠಿ
ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಮೂಲಿಕೆಯಾಗಿದೆ. ಬರೆಯ ಮೂತ್ರಪಿಂಡಗಳು ಮಾತ್ರವಲ್ಲ, ಜೀರ್ಣಾಂಗ ಮತ್ತು ಕರುಳುಗಳಿಂದಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಯಕೃತ್ ಸಹಾ ಇದರಿಂದ ಶುದ್ಧಗೊಳ್ಳುತ್ತದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಾಗಿಲ್ಲ, ದಿನದಲ್ಲಿ ಕುಡಿಯುವ ಟೀ ಯಲ್ಲಿ ಕೊಂಚ ಶುಂಠಿಯನ್ನು ಸೇರಿಸಿದರೆ ಸಾಕು. ಉತ್ತಮ ಪರಿಣಾಮಕ್ಕಾಗಿ ಶುಂಠಿ ಕುದಿಸಿ ಸೋಸಿ ತಣಿಸಿದ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ.

5turmeric

ಅರಿಶಿನ
ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಅರಿಶಿನ ಸಹಾ ಉತ್ತಮವಾಗಿದೆ. ಇದು ಮೂತ್ರಪಿಂಡ ಮತ್ತು ಯಕೃತ್ ಶುದ್ಧೀಕರಿಸಲೂ ನೆರವಾಗುತ್ತದೆ. ಇದರ ಉರಿಯೂತ ನಿವಾರಕ ಗುಣ ಮೂತ್ರಪಿಂಡಗಳ ಸೋಂಕು ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಇದಕ್ಕಾಗಿ ನಿತ್ಯದ ಆಹಾರದಲ್ಲಿ ಅರಿಶಿನ ಪುಡಿಯನ್ನು ಸೇರಿಸಿದರೆ ಸಾಕು.

ಸೆಲೆರಿ ಎಲೆಗಳು (ಗುಡ್ಡದ ಸೊಪ್ಪು)
ಕನ್ನಡದಲ್ಲಿ ಗುಡ್ಡದ ಸೊಪ್ಪು ಎಂದು ಕರೆಯಲ್ಪಡುವ ಸೆಲೆರಿ ಎಲೆಗಳು ಸಹಾ ಉತ್ತಮ ಮೂತ್ರವರ್ಧಕ ಹಾಗೂ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಇದು ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಮೂತ್ರಪಿಂಡಗಳಿಗೆ ಪ್ರಚೋದನೆ ನೀಡಿ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದಕ್ಕಾಗಿ ನಿತ್ಯದ ಊಟದಲ್ಲಿ ಈ ಸೊಪ್ಪನ್ನು ಹಸಿಯಾಗಿ ಸೇವಿಸಿದರೆ ಸಾಕು.

ತುರಿಕೆ ಸೊಪ್ಪು (Nettle)
ಮುಟ್ಟಿದರೆ ಅತೀವವಾದ ತುರಿಕೆಯನ್ನು ತರಿಸುವ ತುರಿಕೆ ಸೊಪ್ಪು ಸಹಾ ಉತ್ತಮ ಮೂತ್ರವರ್ಧಕ ಹಾಗೂ ಸ್ವಚ್ಛಗೊಳಿಸುವ ಮೂಲಿಕೆಯಾಗಿದೆ. ಈ ಎಲೆಗಳನ್ನು ಚೆನ್ನಾಗಿ ಅರೆದು ರಸ ಹಿಂಡಿ ನಿಮ್ಮ ಟೀಯಲ್ಲಿ ಸೇರಿಸಿ ಕುಡಿಯುವ ಮೂಲಕ ಕರುಳುಗಳ ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಇದರೊಂದಿಗೆ ಕೊಂಚ ಶುಂಠಿ ಮತ್ತು ಜೇನು ಸೇರಿಸಿದರೆ ಇದರ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ.

ಕ್ರ್ಯಾನ್ಬೆರಿ ಹಣ್ಣುಗಳ ರಸ
ಮೂತ್ರಕೋಶ, ಮೂತ್ರನಾಳ ಮತ್ತು ಮೂತ್ರಪಿಂಡಗಳಲ್ಲಿ ಆಗಿರುವ ಸೋಂಕನ್ನು ನಿವಾರಿಸಲು ಕ್ರ್ಯಾನ್ಬೆರಿ ಹಣ್ಣುಗಳ ರಸ ಅತ್ಯುತ್ತಮವಾಗಿದೆ. ಮೂತ್ರದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕ್ಯಾಲ್ಸಿಯಂ ಆಕ್ಸಲೇಟ್ ಲವಣವನ್ನು ಹೊರಹಾಕಲು ಈ ರಸ ನೆರವಾಗುತ್ತದೆ. ಈ ಲವಣ ಮೂತ್ರಪಿಂಡಗಳಲ್ಲಿ ಕಲ್ಲುಗಳು ಮೂಡಲು ಮುಖ್ಯ ಕಾರಣವಾಗಿದೆ. ಈ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸುವ ಮೂಲಕ ಮೂತ್ರಕೋಶದ ಗೋಡೆಗಳು ಒಂದಕ್ಕೊಂದು ಅಂಟಿಕೊಳ್ಳುವುದರಿಂದ ( adhesion of bladder) ತಡೆಯಬಹುದು.
ಲಿಂಬೆರಸ
ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಲಿಂಬೆಹಣ್ಣಿಗಿಂತ ಉತ್ತಮವಾದ ದ್ರವ ಇನ್ನೊಂದಿಲ್ಲ. ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲ ಮೂತ್ರಪಿಂಡಗಳಲ್ಲಿ ಈಗಾಗಲೇ ರೂಪುಗೊಂಡಿರುವ ಕಲ್ಲುಗಳನ್ನು ಕರಗಿಸಲು ಮತ್ತು ಇನ್ನಷ್ಟು ಕಲ್ಲುಗಳಾಗದಂತೆ ತಡೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಲಿಂಬೆರಸವನ್ನು ಸೇವಿಸುವುದು ಉತ್ತಮ.

Comments are closed.