ಕರ್ನಾಟಕ

ಇಂದು ಸುಪ್ರೀಂ ಕೋರ್ಟಿನಲ್ಲಿ ‘ಕಾವೇರಿ’ ವಿಚಾರಣೆ….ಏನಾಗಬಹುದು ಎಂಬ ಕಾತುರದಲ್ಲಿದ್ದಾರೆ ನಾಡಿನ ಜನ

Pinterest LinkedIn Tumblr

kaveri

ನವದೆಹಲಿ: ಬಹು ನಿರೀಕ್ಷಿತ ಕಾವೇರಿ ನದಿ ನೀರಿನ ಐತೀರ್ಪು ಮರು ಪರಿಶೀಲನಾ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದ್ದು, ಈ ಹಿಂದಿನ ತೀರ್ಪಿನಲ್ಲಿ ಕರ್ನಾಟಕಕ್ಕೆ ಆಗಿದ್ದ ಅನ್ಯಾಯವನ್ನು ಇಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸರಿದೂಗಿಸಬಹುದು ಎಂಬ ಆಶಾಭಾವ ವ್ಯಕ್ತವಾಗುತ್ತಿದೆ.

ಅಂತೆಯೇ ಈ ಹಿಂದಿನ ಕಾವೇರಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದ್ದು, ತಮಿಳುನಾಡಿಗೆ ನೀರು ಬಿಡುವ ಅಥವಾ ಸಂಕಷ್ಟಕಾಲದಲ್ಲಿ ಬಿಡದಿರುವ ಕುರಿತು ನ್ಯಾಯಾಲಯ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಈ ಬಾರಿ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದ್ದು, ನ್ಯಾ.ದೀಪಕ್ ಮಿಶ್ರಾ, ನ್ಯಾ. ಅಮಿತ್ ರಾಯ್, ಹಾಗೂ ನ್ಯಾ.ಅಜಯ್ ಮಾನಿಕರಾವ್ ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಇನ್ನು ಈ ನೂತನ ತ್ರಿಸದಸ್ಯ ಪೀಠದಿಂದ ನ್ಯಾ. ಉದಯ್ ಲಲಿತ್ ಅವರಿಗೆ ಸ್ಥಾನ ನಿರಾಕರಿಸಲಾಗಿದ್ದು, ಉದಯ್ ಲಲಿತ್ ಅವರು ಈ ಹಿಂದೆ ಜಯಲಲಿತಾ ಅವರ ಪರ ವಕೀಲರಾಗಿದ್ದರು. ಹೀಗಾಗಿ ಅವರು ವಿಚಾರಣೆ ನಡೆಯಬಾರದು ಎಂದು ಕರ್ನಾಟಕ ಮನವಿ ಸಲ್ಲಿಸಿತ್ತು. ಕರ್ನಾಟಕದ ಮನವಿಯನ್ನು ಪುರಸ್ಕರಿಸಲಾಗಿದ್ದು, ತ್ರಿಸದಸ್ಯ ಪೀಠಕ್ಕೆ ಅವರನ್ನು ನೇಮಿಸಲಾಗಿಲ್ಲ.

2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಇದಾಗಿದ್ದು, ಕಾವೇರಿ ನದಿ ನೀರಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳಿಗೂ ಇಂದಿನ ವಿಚಾರಣೆ ತೀರಾ ಮಹತ್ವದ್ದಾಗಿದೆ.

ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತಾಧಿಕಾರ ತಜ್ಞರ ಸಮಿತಿ ನ್ಯಾಯಾಲಯಕ್ಕೆ ತನ್ನ ವಾಸ್ತವಾಂಶ ವರದಿಯನ್ನು ಸಲ್ಲಿಕೆ ಮಾಡಿತ್ತು. ಕೇಂದ್ರ ಜಲಆಯೋಗದ ಮುಖ್ಯಸ್ಥ ಜಿಎಸ್ ಝಾ ನೇತೃತ್ವದ ತಜ್ಞರ ತಂಡ ಉಭಯ ರಾಜ್ಯಗಳ ಕಾವೇರಿ ಕೊಳ್ಳದ ಜಲಾಶಯಗಳಿಗೆ ಭೇಟಿ ನೀಡಿ ವರದಿ ತಯಾರಿಸಿತ್ತು.

Comments are closed.