ಕರ್ನಾಟಕ

ಹತ್ಯೆ ಹಿಂದೆ ಸಂಘಟನೆಯ ಕೈವಾಡ: ಅಶೋಕ

Pinterest LinkedIn Tumblr
Friends and family members of RSS member Rudresh who was murdered at Kamaraj road, staging a protest in front of Commercial street police station in Bengaluru on Sunday. Photo by B K Janardhan
Frie

ಬೆಂಗಳೂರು: ‘ ನಗರದಲ್ಲಿ ಭಾನುವಾರ ಹತ್ಯೆಯಾದ ರುದ್ರೇಶ್ ಅವರು 15 ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯ ಕರ್ತರಾಗಿದ್ದರು. ಹತ್ಯೆಯ ಹಿಂದೆ ಯಾವುದೋ ಸಂಘ ಟನೆಯ ವ್ಯವಸ್ಥಿತ ಸಂಚು ಇದೆ. ವೃತ್ತಿಪರ ಹಂತಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸ ಲಾಗಿದೆ’ ಎಂದು ಬಿಜೆಪಿ ಮುಖಂಡ ಆರ್. ಅಶೋಕ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅಶೋಕ, ‘ರುದ್ರೇಶ್ ಯಾರೊಂದಿಗೆ ದ್ವೇಷ ಕಟ್ಟಿಕೊಂಡವರಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯ ಕರ್ತನೆಂಬ ಒಂದೇ ಉದ್ದೇಶಕ್ಕೆ ಈ ಹತ್ಯೆ ಮಾಡಲಾಗಿದೆ’ ಎಂದು ದೂರಿದರು.

ಅದ್ದೂರಿ ಗಣೇಶ ಉತ್ಸವ: ‘ಇಷ್ಟು ವರ್ಷ ದಿಂದ ಶಿವಾಜಿ ವೃತ್ತದಲ್ಲಿ ಯಾರೂ ಗಣೇಶನ ಮೂರ್ತಿಯನ್ನು ಕೂರಿಸಿ ರಲಿಲ್ಲ. ಆದರೆ ಈ ವರ್ಷ ರುದ್ರೇಶ್ ಅವರು ಗಣೇಶ ಮೂರ್ತಿ ಕೂರಿಸಿ, ಅದ್ದೂರಿ ಕಾರ್ಯಕ್ರಮ ಮಾಡಿದ್ದರು. ಇದು ಹಲವರ ಸಿಟ್ಟಿಗೆ ಕಾರಣವಾಗಿತ್ತು.’
‘ಶನಿವಾರ ಶಿವಾಜಿ ವೃತ್ತಕ್ಕೆ ಬಂದಿದ್ದ ಯಾರೋ ಅಪರಿಚಿತರು, ಗಣೇಶ ಹಬ್ಬದ ದಿನ ಪ್ರಸಾದ ಹಂಚುತ್ತಿದ್ದ ವ್ಯಕ್ತಿ ಎಲ್ಲಿದ್ದಾನೆ ಎಂದು ಸ್ಥಳೀಯರನ್ನು ವಿಚಾರಿಸಿ ಹೋಗಿದ್ದರು. ಈ ರೀತಿ ಎಲ್ಲ ಕಡೆಗಳಿಂದ ರುದ್ರೇಶ್ ಅವರ ವಿವರ ಸಂಗ್ರಹಿಸಿರುವ ಹಂತಕರು, ವ್ಯವಸ್ಥಿತ ವಾಗಿ ಸಂಚು ರೂಪಿಸಿ ಹತ್ಯೆಗೈದಿದ್ದಾರೆ’ ಎಂದು ದೂರಿದರು.

ಉರ್ದು ಮಾತನಾಡುತ್ತಿದ್ದರು: ‘ಘಟನೆ ಬಗ್ಗೆ ರುದ್ರೇಶ್ ಸ್ನೇಹಿತರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ‘ಮಾರ್ ದೋ ಚಿನಾಲ್ಕೆ’ ಎಂದು ಹೇಳಿ ಹಂತಕರು ಮಚ್ಚಿ ನಿಂದ ಕುತ್ತಿಗೆಗೆ ಹೊಡೆದಿದ್ದಾರೆ. ಅವರಿ ಬ್ಬರೂ 25 ರಿಂದ 30ರ ವಯೋ ಮಾನ ದವರು. ಇಷ್ಟೆಲ್ಲ ಮಾಹಿತಿ ಇದ್ದರೂ, ಪೊಲೀಸರು ತನಿಖೆ ಮಾಡ ದೆಯೇ ಇದನ್ನು ಕೌಟುಂಬಿಕ ಕಲಹ ಎಂದು ಬಿಂಬಿಸಲು ಹೊರಟಿದ್ದಾರೆ. ನಾನೂ ಗೃಹ ಮಂತ್ರಿ ಆಗಿದ್ದವನು. ಈ ಪ್ರಕರಣದ ವಿವರ ಗೊತ್ತಿದೆ.’

‘ರುದ್ರೇಶ್ ಅವರು ತಳ್ಳುಗಾಡಿ ವಿಚಾರಕ್ಕೆ ನೆರೆಮನೆಯವನ ಜತೆ ಆರು ವರ್ಷಗಳ ಹಿಂದೆ ಜಗಳ ಮಾಡಿ ಕೊಂಡಿದ್ದರು. ಅಂದಿನ ಗಲಾಟೆಯನ್ನು ಈ ಹತ್ಯೆಗೆ ತಳುಕು ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ರಾತ್ರಿಯೊಳಗೆ ಹಂತ ಕರನ್ನು ಪತ್ತೆ ಮಾಡದಿದ್ದರೆ, ಸೋಮ ವಾರ ಬೆಳಿಗ್ಗೆ 11 ಗಂಟೆಗೆ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ನಿರಂತರವಾಗಿ ದಾಳಿ ನಡೆಯುತ್ತಿವೆ: ‘ಕೆಲ ದಿನಗಳ ಹಿಂದೆ ವಿದ್ಯಾರಣ್ಯ ಪುರ ದಲ್ಲಿ ಫಣೀಂದ್ರ ಎಂಬ ಆರ್‌ಎಸ್‌ಎಸ್‌ ಕಾರ್ಯಕರ್ತನ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಲಾಗಿತ್ತು. ವಾರದ ಹಿಂದೆ ಮುತ್ಯಾಲನಗರದಲ್ಲಿ ದಿಲೀಪ್‌ ಎಂಬ ಕಾರ್ಯಕರ್ತನ ಮೇಲೂ ಹಲ್ಲೆ ನಡೆದಿದೆ. ಇದನ್ನು ನೋಡಿದರೆ, ಆರ್‌ಎಸ್‌ಎಸ್‌ ಕಾರ್ಯಕರ್ತರನ್ನೇ ಗುರಿ ಯಾಗಿಸಿಕೊಂಡು ದಾಳಿ ಮಾಡುತ್ತಿರು ವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರುದ್ರೇಶ್ ಹತ್ಯೆಯನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸಬೇಕು. ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಆಗ್ರಹಿಸಿದ್ದಾರೆ.

ಬ್ಯಾನರ್‌ ಗಲಾಟೆ: ‘ದಸರಾ ಪ್ರಯುಕ್ತ ಶಿವಾಜಿ ವೃತ್ತದಲ್ಲಿ ಬ್ಯಾನರ್ ಕಟ್ಟುತ್ತಿದ್ದಾಗ ರುದ್ರೇಶ್ ಅವರು ಕೆಲ ಸಂಘಟನೆ ಸದಸ್ಯರ ಜತೆ ಗಲಾಟೆ ಮಾಡಿ ಕೊಂಡಿ ದ್ದರು. ಆ ಜಗಳವೂ ಅವರ ಹತ್ಯೆಗೆ ಕಾರಣವಾಗಿರಬಹುದು’ ಎಂದು ಮೃತರ ಸ್ನೇಹಿತರು ಶಂಕೆ
ವ್ಯಕ್ತಪಡಿಸಿದ್ದಾರೆ.

ರಾಜು ಕೊಲೆ ಮಾದರಿಯಲ್ಲೇ ಹತ್ಯೆ: ಕಳೆದ ವರ್ಷ ಮೈಸೂರಿನಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ ಮುಖಂಡ ರಾಜು ಅವರ ಹತ್ಯೆಯ ಮಾದರಿಯಲ್ಲೇ ರುದ್ರೇಶ್ ಅವರ ಕೊಲೆ ನಡೆದಿದೆ.

ಮನೆ ಹತ್ತಿರ ಟೀ ಕುಡಿಯುತ್ತಿದ್ದ ರಾಜು ಅವರನ್ನು ಹಂತಕರು ತಲ್ವಾರ್‌ನಿಂದ ಕೊಚ್ಚಿ ಕ್ಷಣಾರ್ಧದಲ್ಲಿ ಪರಾರಿಯಾ ಗಿದ್ದರು. ಹೀಗಾಗಿ, ಆ ಪ್ರಕರಣದ ಆರೋಪಿಗಳನ್ನು ಸಹ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ನಿಷೇಧಾಜ್ಞೆ ಜಾರಿ: ‘ಮುಂಜಾಗ್ರತಾ ಕ್ರಮವಾಗಿ ಕಮರ್ಷಿಯಲ್‌ ಸ್ಟ್ರೀಟ್‌, ಪುಲಿಕೇಶಿನಗರ, ಶಿವಾಜಿನಗರ ಹಾಗೂ ಭಾರತೀನಗರ ಠಾಣೆ ವ್ಯಾಪ್ತಿಯಲ್ಲಿ ನಿಷೇ ಧಾಜ್ಞೆ ಜಾರಿಗೊಳಿಸಲಾಗಿದೆ. ಈ ವೇಳೆ ಯಾರಾದರೂ ಕಾನೂನು ಉಲ್ಲಂಘಿಸಿದರೆ, ಅಂಥಹವರನ್ನು ಬಂಧಿಸಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ತಿಳಿಸಿದರು.

ರುದ್ರೇಶ್‌ ಹತ್ಯೆ ಸಂಬಂಧ ಭಾನುವಾರ ತಡರಾತ್ರಿ ಐದಕ್ಕೂ ಹೆಚ್ಚು ಅನು ಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್ ಠಾಣೆ ಮುಂದೆ ಪ್ರತಿಭಟನೆ

ಘಟನೆಯಿಂದ ಆಕ್ರೋಶಗೊಂಡ ಆರ್ಎಸ್‌ಎಸ್‌ ಕಾರ್ಯಕರ್ತರು ಹಾಗೂ ಮೃತರ ಕುಟುಂಬ ಸದಸ್ಯರು, ‘ಇದೊಂದು ಪೂರ್ವನಿಯೋಜಿತ ಕೃತ್ಯ. ಆರ್‌ಎಸ್‌ಎಸ್‌ ಕಾರ್ಯಕರ್ತ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ. ಕೂಡಲೇ, ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದರು.

ಈ ವೇಳೆ ಸ್ಥಳಕ್ಕೆ ಬಂದ ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್, ‘ಹಂತಕರ ಬಗ್ಗೆ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು’ ಎಂದು ಹೇಳಿದರು. ರಾತ್ರಿಯೊಳಗೆ ಹಂತಕರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ನಂತರ ಶಿವಾಜಿ ವೃತ್ತಕ್ಕೆ ತೆರಳಿ ರಾತ್ರಿ 8 ಗಂಟೆವರೆಗೆ ಧರಣಿ ಮಾಡಿದರು.

ಹತ್ಯೆ ನಡೆದ ಬಳಿಕ ಕಾಮರಾಜ ರಸ್ತೆಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು, ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌), ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ಆ ನಂತರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಯಿತು. ಶಾಸಕರಾದ ಆರ್‌. ಅಶೋಕ್‌, ಅರವಿಂದ ಲಿಂಬಾವಳಿ, ಸಂಸದರಾದ ಪಿ.ಸಿ. ಮೋಹನ್‌ ಮತ್ತು ಪ್ರತಾಪ್‌ ಸಿಂಹ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಹಂತಕರನ್ನು ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಹಂತಕರ ಪತ್ತೆಗೆ ಐದು ತಂಡ ರಚನೆ

‘ರುದ್ರೇಶ್ ಅವರ ವಿರುದ್ಧ ಹಿಂದೆ ಕೆಲವು ಪ್ರಕರಣಗಳು ದಾಖಲಾಗಿದ್ದವು. ಕೌಟುಂಬಿಕ ಕಲಹ, ವ್ಯವಹಾರಿಕ ವೈಷಮ್ಯ, ಸಂಘಟನೆಗಳ ಕೈವಾಡ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ. ಹಂತಕರ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸ ಲಾಗಿದೆ. ಸಿಸಿಬಿ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ’ ಎಂದು ಕಮಿನಷರ್ ಮೇಘರಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಥಸಂಚಲನ ಮುಗಿಸಿಕೊಂಡು ರುದ್ರೇಶ್ ಮನೆಗೆ ಹೋಗಿದ್ದರು. ಯಾರೋ ಕರೆ ಮಾಡಿ ಅವರನ್ನು ಕರೆಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲೂ ತನಿಖೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಮಕ್ಕಳೂ ಪಥಸಂಚಲನಕ್ಕೆ ಹೋಗಿದ್ದರು

‘ಪತ್ನಿ ವಿದ್ಯಾ ಹಾಗೂ ಇಬ್ಬರು ಮಕ್ಕಳ ಜತೆ ಶಿವಾಜಿನಗರದ ಮಿಲ್ಕ್‌ ಮೆನ್‌ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ ರುದ್ರೇಶ್, ಬೆಳಿಗ್ಗೆ ತಮ್ಮ ಮಕ್ಕಳನ್ನು ಸಹ ಪಥಸಂಚಲನಕ್ಕೆ ಕರೆದುಕೊಂಡು ಬಂದಿದ್ದರು’ ಎಂದು ಮೃತರ ಸ್ನೇಹಿತರು ಹೇಳಿದರು.

ಪಥಸಂಚಲನ ಮುಗಿದ ನಂತರ ‘ನಾನು ಆಮೇಲೆ ಬರುತ್ತೇನೆ. ನೀವು ಮನೆಗೆ ಹೋಗಿರಿ’ ಎಂದು ಹೇಳಿ ಮಕ್ಕಳನ್ನು ಮನೆಗೆ ಕಳುಹಿಸಿದ್ದರು.
ಸಿವಿಲ್ ಗುತ್ತಿಗೆದಾರರಾಗಿದ್ದ ರುದ್ರೇಶ್, ಹಾಲಿನ ವ್ಯಾಪಾರ, ಫೈನಾನ್ಸ್‌ ಹಾಗೂ ರಿಯಲ್‌ ಎಸ್ಟೇಟ್ ವ್ಯವಹಾರವನ್ನೂ
ಮಾಡುತ್ತಿದ್ದರು.

* ಪೊಲೀಸ್ ಕಮಿಷನರ್‌ ಅವರು ಪ್ರಕರಣದ ಬಗ್ಗೆ ತನಿಖೆಯನ್ನೂ ಮಾಡದೆ, ಇದು ವೈಯಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಎಂದಿದ್ದಾರೆ. ಈ ರೀತಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. – ಅರವಿಂದ ಲಿಂಬಾವಳಿ, ಶಾಸಕ

* ರುದ್ರೇಶ್ ಅವರ ಹತ್ಯೆ ಖಂಡಿಸಿ ಸೋಮವಾರ ಶಿವಾಜಿನಗರ ಬಂದ್‌ ಮಾಡುತ್ತೇವೆ. -ಕೆ.ಎಸ್.ಶ್ರೀಧರ್, ಆರ್‌ಎಸ್ಎಸ್‌ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ

Comments are closed.