ಕರ್ನಾಟಕ

ಕೇವಲ 98 ನೋಟುಗಳ ಬೆಲೆ 105 ಕೋಟಿ ರೂ.!

Pinterest LinkedIn Tumblr

turkey-currency-notesಬೆಂಗಳೂರು: ಟರ್ಕಿಯಲ್ಲಿ ನಿಷೇಧ ಆಗಿದ್ದ ಹಣ ಅದು. ನಿಷೇಧವಾಗಿದ್ದ ಕರೆನ್ಸಿಗೆ ಭಾರತದಲ್ಲಿ ಭಾರೀ ಬೇಡಿಕೆಯಂತೆ. ಈ ವಿಚಾರ ತಿಳಿದುಕೊಂಡ ಖದೀಮರು ಹಣವನ್ನು ಕೆಲ ವರ್ಷಗಳಿಂದ ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಮಾರಾಟ ಮಾಡುತ್ತಿರುವಾಗಲೇ ಸಂಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳಿಂದ 105 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟರ್ಕಿ ದೇಶದಲ್ಲಿ ಬ್ಯಾನ್ ಆಗಿರುವ ನೋಟುಗಳನ್ನು ಬೆಂಗಳೂರಿಗೆ ತರುತ್ತಿದ್ದ ಇವರು ಒಂದು ನೋಟನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಅಮಾಯಕ ಜನ ಇದ್ಯಾವುದು ಗೊತ್ತಿಲ್ಲದೇ ಹಣವನ್ನ ಖರೀದಿ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಶಿವಕುಮಾರ್, ಶಿವಶಂಕರ್, ವಕೀಲ ಪ್ರಭು ಸೇರಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

105 ಕೋಟಿ ರೂ.: ಬಂಧಿತರ ಬಳಿಯಿಂದ ಬ್ಯಾನ್ ಆಗಿರುವ 5 ಲಕ್ಷ ಟರ್ಕಿಶ್ ಲಿರಾ ಮುಖಬೆಲೆಯ ನೋಟುಗಳು ಸಿಕ್ಕಿದರೆ ಒಂದು ನೋಟಿನ ಮುಖ ಬೆಲೆ ಬರೋಬ್ಬರಿ 1 ಕೋಟಿ 7 ಲಕ್ಷ ಟರ್ಕಿಶ್ ಲಿರಾ. ಒಟ್ಟು 98 ನೋಟುಗಳು ಸಿಕ್ಕಿದ್ದು ಇವುಗಳ ಒಟ್ಟು ಬೆಲೆ 105 ಕೋಟಿ ರೂಪಾಯಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿಬಿದ್ದದ್ದು ಹೇಗೆ?
ದೇಶಗಳಿಂದ ಹೈದರಾಬಾದ್ ವಿಮಾನ ನಿಲ್ದಾಣ ಟರ್ಕಿ ಕರೆನ್ಸಿಗಳನ್ನು ತರುತ್ತಿದ್ದ ಇವರು ಬಳಿಕ ಬೆಂಗಳೂರಿಗೆ ತಂದು ಮಾರಾಟ ಕರೆನ್ಸಿ ಸಂಗ್ರಹ ಮಾಡುವ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಸಂಜಯ ನಗರ ಪೊಲೀಸರಿಗೆ ಆರೋಪಿಗಳು ನಿಷೇಧಿಸಲ್ಪಟ್ಟ ಹಣವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಜಮೀರ್ ಅಹಮದ್‍ನನ್ನು ಸಂಪರ್ಕಿಸಿ ಗುರುವಾರ ರಾತ್ರಿ ಕರೆನ್ಸಿ ಖರೀದಿಗೆ ಬರುವುದಾಗಿ ಪೇದೆಯೊಬ್ಬರು ಹೇಳಿದ್ದರು. ಇದರಂತೆ ಪೇದೆಯೊಬ್ಬರು ಜಮೀರ್ ಬಳಿ ತೆರಳಿ ಕರೆನ್ಸಿ ಪಡೆದ್ದರು. ಈ ವೇಳೆ ನಮ್ಮ ತಂಡದಲ್ಲಿ ಇನ್ನು 98 ಕರೆನ್ಸಿಗಳು ಇದೆ ಎಂದು ಜಮೀರ್ ಹೇಳಿದ್ದಾನೆ. ಈ ವಿಚಾರ ತಿಳಿದಕೂಡಲೇ ಪೇದೆ ಆ ಎಲ್ಲ ಹಣವನ್ನು ಖರೀದಿ ಮಾಡಲು ನಿಮ್ಮ ತಂಡವನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಮಾತಿಗೆ ಜಮೀರ್ ಒಪ್ಪಿಗೆ ಸೂಚಿಸಿದ್ದ. ಆದರಂತೆ ಎಸ್‍ಐ ಚಂದ್ರಶೇಖರ್ ನೇತೃತ್ವದ ಸಂಜಯನಗರ ಪೊಲೀಸರು ತೆರಳಿ ಇಡಿ ತಂಡವನ್ನು ಬಂಧಿಸಿದೆ.

ಸದ್ಯ ಎಂಟು ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದು ಮತ್ತಷ್ಟು ಮಾಹಿತಿಗಳು ಹೊರಬರಲಿದೆ.

Comments are closed.