ಕರ್ನಾಟಕ

ವಿಕೃತಕಾಮಿ ಉಮೇಶ್ ರೆಡ್ಡಿಗೆ ನೇಣುಕುಣಿಕೆ ಮತ್ತಷ್ಟು ಹತ್ತಿರ

Pinterest LinkedIn Tumblr

umeshಬೆಳಗಾವಿ: ವಿಕೃತ ಕಾಮಿ, ಸರಣಿ ಹಂತಕ ಉಮೇಶ ರೆಡ್ಡಿ ನೇಣು ಕುಣಿಕೆಗೆ ಮತ್ತಷ್ಟು ಹತ್ತಿರವಾಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ್ದ ಆದೇಶದ ಪ್ರತಿ ಇದೀಗ ಉಮೇಶ್ ರೆಡ್ಡಿ ಕೈ ಸೇರಿದೆ.

ಉಮೇಶ ರೆಡ್ಡಿಗೆ ಮರಣ ದಂಡನೆ ವಿಧಿಸಿಲು ಬೆಂಗಳೂರಿನ 61ನೇ ಅಡಿಷನ್ ಸಿಟಿ ಸಿವಿಲ್ ನ್ಯಾಯಾಲಯ ಬ್ಲ್ಯಾಕ್ ವಾರೆಂಟ್ ಹೊರಡಿಸಬೇಕು. ಈ ವಾರೆಂಟ್ ಪಡೆಯಲು ಇದೀಗ ಬೆಳಗಾವಿ ಜೈಲು ಅಧೀಕ್ಷಕರಾದ ಟಿ.ಶೇಷ ಬೆಂಗಳೂರಿಗೆ ತೆರಳಿದ್ದಾರೆ. ಮರು ಪರಿಶೀಲನಾ ಅರ್ಜಿ ತಿರಸ್ಕೃತಗೊಂಡ 14 ದಿನಗಳ ಒಳಗೆ ಬ್ಲ್ಯಾಕ್ ವಾರೆಂಟ್ ಹೊರಡಿಸಬೇಕು. ಇನ್ನೂ ಸೋಮವಾರ ಮತ್ತೆ ರೆಡ್ಡಿ ಪರ ವಕೀಲರು ಮತ್ತೊಮ್ಮೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ರೆಡ್ಡಿ ಬದುಕಿನ ಕೊನೆಯ ಪ್ರಯತ್ನವಾಗಿದೆ. ಆದರೆ ಕೆಲ ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವ ಕಾರ್ಯ ನಡೆಯಲಿದೆ ಎಂದು ಹಿಂಡಲಗಾ ಜೈಲಿನ ಮೂಲಗಳು ತಿಳಿಸಿವೆ. ಜೈಲಿನ ಬೆಳವಣಿಗೆ ಬಗ್ಗೆ ರೆಡ್ಡಿ ಸಂಬಂಧಿಕರಿಗೆ ಸಹ ಎಲ್ಲಾ ರೀತಿಯ ಮಾಹಿತಿ ನೀಡಲಾಗಿದೆ.

ಅಮ್ಮನ ಜೊತೆ ಮಾತನಾಡಿದ ರೆಡ್ಡಿ: ಇನ್ನು ಉಮೇಶ್ ರೆಡ್ಡಿ ತನ್ನ ತಾಯಿಯೊಂದಿಗೆ ನಿನ್ನೆ 15 ನಿಮಿಷ ಮಾತನಾಡಿದ್ದಾನೆ. ಅನೇಕರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ, ಅದೇ ರೀತಿ ನನ್ನ ಮರಣವಾಗಿದೆ ಎಂದು ಭಾವಿಸುವಂತೆ ತಾಯಿ ಬಳಿ ಹೇಳಿಕೊಂಡಿದ್ದಾನೆ. ಜತೆಗೆ ತಾನು ಬಳಸುತ್ತಿದ್ದ ಬುಕ್, ಫೋಟೋ ಅಲ್ಬಮ್‍ಗಳನ್ನು ಜೈಲಿನ ಅಧಿಕಾರಿಗಳಿಗೆ ವಾಪಸ್ ನೀಡಿದ್ದಾನೆ. ಜತೆಗೆ ಉಮೇಶ್ ರೆಡ್ಡಿ ಸೋದರ ಮಾವ ಹಣಮಂತ ರೆಡ್ಡಿ ಜತೆಗೆ ಮಾತನಾಡುವ ಆಸೆ ವ್ಯಕ್ತಪಡಿಸಿದ್ದಾನೆ.

ಈವರೆಗೆ ನಾಸ್ತಿಕನಾಗಿದ್ದ ರೆಡ್ಡಿ, ನಿನ್ನೆಯಿಂದ ದೇವರ ಮೊರೆ ಹೋಗಿದ್ದಾನೆ. ಆಂಜನೇಯ ದೇವರ ಧ್ಯಾನದಲ್ಲಿ ಮಗ್ನನಾಗಿದ್ದಾನೆ. ಪ್ರತಿ ದಿನ ಎದ್ದು ಎರಡು ಬಾರಿ ದೇವರ ದರ್ಶನ ಪಡೆಯುತ್ತಿದ್ದಾನೆ. ರೆಡ್ಡಿ ಆರೋಗ್ಯ ಸಹ ಸ್ಥಿರವಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

Comments are closed.