ಬಳ್ಳಾರಿ: ಹಿಂದೂ ಹುಡುಗನ ಜೊತೆ ಸುತ್ತಾಡದಂತೆ ಮುಸ್ಲಿಂ ಯುವತಿಗೆ ಬಳ್ಳಾರಿಯಲ್ಲಿ ಇತ್ತೀಚಿಗೆ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಇದೀಗ ಹೊಸ ಟಿಸ್ಟ್ ದೊರೆತಿದೆ.
ರಾಯದುರ್ಗ ಮೂಲದ ಮುಸ್ಲಿಂ ಯುವತಿ ಶಹನಾಜ್ ಇದೇ ತಿಂಗಳ 3ರಂದು ಹಿಂದೂ ಹುಡುಗನ ಜೊತೆ ಪಾರ್ಕ್‍ಗೆ ತೆರಳಿದ್ದಳು. ಈ ವೇಳೆಯಲ್ಲಿ ಮುಸ್ಲಿಂ ಮುಖಂಡನಾದ ವಿಕಾರ ಅಹ್ಮದ್, ಯುವತಿಗೆ ಧಮ್ಕಿ ಹಾಕಿದ್ದ. ಹುಡುಗನ ಜೊತೆ ಇರುವ ಫೋಟೋ ತಗೆದು ಫೇಸ್‍ಬುಕ್ ಗೆ ಹಾಕೋ ಬೆದರಿಕೆಯೊಡ್ಡಿದ್ದ. ಅಲ್ಲದೇ ಹಿಂದೂ ಹುಡುಗನ ಜೊತೆ ಸೇರದಂತೆ ಅವಾಜ್ ಹಾಕಿ ಹಲ್ಲೆ ಸಹ ಮಾಡಿದ್ದ.
ಈ ಕುರಿತು ಯುವತಿ ಬಳ್ಳಾರಿ ಎಸ್‍ಪಿಗೆ ದೂರು ನೀಡಿ ಕೌಲ್‍ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಪ್ರಕರಣ ದಾಖಲಾದ ನಂತರ ವಿಕಾರ್ ಅಹ್ಮದ್ ಹಾಗೂ ಆತನ ಬೆಂಬಲಿಗರು ಯುವತಿಗೆ ಮತ್ತೆ ಧಮ್ಕಿ ಹಾಕಿದ್ದಾರೆ. ಈ ರೀತಿ ಮಾಡಿದ್ರೆ ಸರಿ ಇರಲ್ಲ ಅಂತಾ ಎಚ್ಚರಿಕೆ ಹಾಕಿದ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಆ ಗಂಗಾಧರ್ ಜೊತೆಗಿರರುವ ಫೋಟೋ ಡಿಲೀಟ್ ಮಾಡು. ಇಲ್ಲವಾದ್ರೆ ಅವನನ್ನ ಬಳ್ಳಾರಿಯಲ್ಲಿ ಓಡಾಡೋಕೆ ಬಿಡಲ್ಲ. ಅರ್ಥ ಮಾಡ್ಕೋ ಎಂದಿದ್ದಾನೆ. ಇದಕ್ಕೆ ಆ ಯುವತಿ ನಾನು ಕೇಳೋದಿಲ್ಲ, ಏನು ಮಾಡ್ತೀಯಾ? ಎಂದಿದ್ದಕ್ಕೆ ಆಯ್ತು ನಿನ್ನಿಷ್ಟ ಬಂದಂತೆ ಇರು. ಮುಂದೆ ನೋಡು ಅಂತ ಬೆದರಿಕೆ ಹಾಕಿದ್ದಾನೆ.