ಕರ್ನಾಟಕ

ಬೆಳಗಾವಿ ವಿಮಾನ ನಿಲ್ದಾಣದ ಗೋಡೆ ಹಾರಲು ಯತ್ನ: ನಾಲ್ವರ ವಶಕ್ಕೆ ?

Pinterest LinkedIn Tumblr

belgaumಬೆಳಗಾಂ, ಅ. ೧೪ – ಅಪರಿಚಿತ ದುಷ್ಕರ್ಮಿಗಳು ಇಲ್ಲಿನ ವಿಮಾನ ನಿಲ್ದಾಣದ ಗೋಡೆ ಹಾರಿ ಏಕಾ-ಏಕಿ ಒಳ ನುಗ್ಗಿದ ಪರಿಣಾಮವಾಗಿ ಇಡೀ ನಿಲ್ದಾಣದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುಮಾರು 12 ಜನರ ದುಷ್ಕರ್ಮಿಗಳ ತಂಡವೊಂದು ವಿಮಾನ ನಿಲ್ದಾಣದ ಗೋಡೆ ಹಾರಿದ್ದರಿಂದ ಗಲಿಬಿಲಿಗೊಂಡ ಭದ್ರತಾ ಸಿಬ್ಬಂದಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ 8 ಮಂದಿ ಮತ್ತೆ ಗೋಡೆ ಹಾರಿ ಪರಾರಿಯಾಗಿದ್ದಾರೆ. ಬಂಧಿಸಿರುವ ನಾಲ್ವರನ್ನು ಭದ್ರತಾ ಸಿಬ್ಬಂದಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ವಿಮಾನ ನಿಲ್ದಾಣದ ಸುತ್ತ ಕೈಗಾರಿಕೆ ಭದ್ರತಾ ಸಿಬ್ಬಂದಿ ಸರ್ಪ ಗಾವಲಿದ್ದರೂ ಅವರ ಕಣ್ತಪ್ಪಿಸಿ ದುಷ್ಕರ್ಮಿಗಳು ವಿಮಾನ ನಿಲ್ದಾಣದ ಆಗ್ನೇಯ ದಿಕ್ಕಿನಲ್ಲಿರುವ 12 ಅಡಿ ಎತ್ತರದ ಗೋಡೆಯನ್ನು ಹಾರಿ ನಿಲ್ದಾಣದೊಳಕ್ಕೆ ನುಗ್ಗಿದ್ದು ನೆರೆದಿದ್ದ ಪ್ರಯಾಣಿಕರನ್ನೂ ಆತಂಕಕ್ಕೆ ದೂಡಿತ್ತು.
ದುಷ್ಕರ್ಮಿಗಳನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನೂ ಲೆಕ್ಕಿಸದೆ ದುಷ್ಕರ್ಮಿಗಳು ಏಕಾ-ಏಕಿ ನಿಲ್ದಾಣದೊಳಕ್ಕೆ ನುಗ್ಗಿದ್ದರ ಹಿನ್ನೆಲೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಘಟನೆಯಿಂದಾಗಿ ಇಡೀ ಬೆಳಗಾವಿ ನಗರದಾದ್ಯಂತ ನಾನಾ ರೀತಿಯ ಊಹಾ-ಪೋಹಗಳು ಹಬ್ಬಿವೆ. ಘಟನೆ ನಂತರ ಪೊಲೀಸರು ವಿಮಾನ ನಿಲ್ದಾಣ ಮತ್ತು ನಗರದಾದ್ಯಂತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಿದ್ದಾರೆ.

Comments are closed.