ಕರ್ನಾಟಕ

ರಾಷ್ಟ್ರೀಯ ನದಿ ನೀರು ಹಂಚಿಕೆ ಮಸೂದೆಯಿಂದ ಕಾವೇರಿ ವಿವಾದ ಬಗೆಹರಿಯುವುದೇ?

Pinterest LinkedIn Tumblr

kaveri_historryನವದೆಹಲಿ: ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ‘ರಾಷ್ಟ್ರೀಯ ನದಿನೀರು ಹಂಚಿಕೆ ಮಸೂದೆ–2016’ ರ ಅಂತಿಮ ಕರಡು ಪ್ರತಿ ಸಿದ್ಧಪಡಿಸಿದೆ.

ರಾಜ್ಯದ ನದಿಗಳ ಜಲಾನಯನ ಪ್ರದೇಶ ಮತ್ತು ಅಂತರರಾಜ್ಯ ನದಿಗಳ ಜಲಾನಯನ ಮಟ್ಟದಲ್ಲಿ ಸಾಂಸ್ಥಿಕ ವ್ಯವಸ್ಥೆ ಸ್ಥಾಪಿಸುವ ಪ್ರಸ್ತಾಪವನ್ನು ಈ ಮಸೂದೆ ಹೊಂದಿದೆ. ಮಾತುಕತೆ, ರಾಜಿ ಸಂಧಾನ ಅಥವಾ ಮಧ್ಯಸ್ಥಿಕೆ ಮೂಲಕ ವಿವಾದಗಳನ್ನು ಪರಿಹರಿಸಬಹುದು ಎಂದು ಇದು ಹೇಳಿದೆ.

ಮಸೂದೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಸಾರ್ವಜನಿಕರನ್ನು ಕೇಳಿತ್ತು. ಜನರು ನೀಡಿದ್ದ ಕೆಲವು ಸಲಹೆ ಗಳನ್ನು ಅಳವಡಿಸಿಕೊಂಡ ಅಂತಿಮ ಕರಡು ಇದೀಗ ಸಿದ್ಧವಾಗಿದ್ದು, ಸಂಸತ್ತಿನಲ್ಲಿ ಮಂಡನೆಗೂ ಮೊದಲು ಸಂಪುಟ ಸಭೆಯ ಅನುಮೋದನೆಗೆ ಕಳುಹಿಸಲಾಗುತ್ತದೆ.

‘ಹಕ್ಕುಗಳು ಮತ್ತು ಸ್ಥಾನಮಾನಗಳಲ್ಲಿ ಎಲ್ಲ ಜಲಾನಯನ ರಾಜ್ಯಗಳು ಸಮಾನ. ಮತ್ತು ಅವುಗಳ ನಡುವೆ ಯಾವುದೇ ಶ್ರೇಣೀಕೃತ ಹಕ್ಕು ಇರುವುದಿಲ್ಲ. ಸಮಾನ ಹಕ್ಕುಗಳು ಎಂದರೆ ನದಿನೀರು ಹಂಚಿಕೆಯಲ್ಲಿ ನ್ಯಾಯಸಮ್ಮತ ಪಾಲು ಎಂದರ್ಥ’ ಎಂದು ಕರಡು ಮಸೂದೆ ಹೇಳುತ್ತದೆ.

ನದಿಗಳು ಹಾಗೂ ಕಣಿವೆಗಳ ಸೂಕ್ತ ಮತ್ತು ಸುಸ್ಥಿರ ಅಭಿವೃದ್ಧಿ ಖಚಿತಪಡಿಸುವ ಅಂತರರಾಜ್ಯ ನದಿ ಜಲಾನಯನ ಪ್ರಾಧಿಕಾರ ಸ್ಥಾಪನೆಗೆ ಈ ಕರಡು ಮಸೂದೆಯು ಒಲವು ವ್ಯಕ್ತಪಡಿಸಿದೆ.

Comments are closed.