ಶಿಮೊಗ್ಗ(ಅ.12): ವಿಧವೆ ಮೇಲಿನ ಪ್ರೀತಿಗೆ ಮಗನನ್ನೇ ಭೀಕರವಾಗಿ ಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ನಡ್ದಿದೆ. ಅದೃಷ್ಟವಶಾತ್ ಬಾಲಕನ ಸೋದರನ ಪ್ರವೇಶದಿಂದ ಕೊಲೆಯೊಂದು ಕೈತಪ್ಪಿದೆ. ಆದರೆ, 10 ವರ್ಷದ ಬಾಲಕನನ್ನು ತುಳಿದು ಕುತ್ತಿಗೆಗೆ ಬಟ್ಟೆ ಸುತ್ತಿ ಉಸಿರುಗಟ್ಟಿಸಲು ಯತ್ನಿಸಿದ ಕಾರಣ ತೀವ್ರ ಅಸ್ವಸ್ಥಗೊಂಡಿದ್ದಾನೆ.
ಹಾಸನದ 10 ವರ್ಷದ ರಾಹುಲ್ ತನ್ನ ಹತ್ತಿರದ ಸಂಬಂಧಿ 15 ವರ್ಷದ ಉತ್ಸವ್ ಜೊತೆಗೆ ಆಯುಧ ಪೂಜೆಯಂದು ರೈಲಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದ. ಬೆಳಗ್ಗೆ ರೈಲು ಅರಸಿಕೆರೆ ದಾಟುವಾಗ ರೈಲಿನ ಶೌಚಾಲಯಕ್ಕೆ ಹೋಗಿದ್ದಾನೆ. ಆಗಲೇ ರಾಹುಲ್ ನನ್ನು ಹಿಂಬಾಲಿಸಿದ್ದ ಹಂತಕ ಚಂದ್ರು ಸಾಯಿಸಲು ಯತ್ನ ನಡೆಸಿ ನಂತರ ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಭಯದಿಂದ ತಪ್ಪಿಸಿಕೊಂಡಿದ್ದಾನೆ.
3 ವರ್ಷದ ಹಿಂದೆ ಹಾಸನದ ಬೇಲೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದ ಸುರೇಶ್ ನಿಧನರಾಗುತ್ತಿದ್ದಂತೆ ಪತ್ನಿ ರಾಹುಲ್ ತಾಯಿ ಶೈಲಾ ಹಾಸನದಲ್ಲಿರುವ ತನ್ನ ತಾಯಿ ಮನೆಗೆ ಬಂದು ನೆಲೆಸಿದ್ದರು. ಕಳೆದೊಂದು ವರ್ಷದಿಂದ ಎದುರು ಮನೆಯಲ್ಲಿ ವಾಸವಾಗಿದ್ದ ಚಂದ್ರು ಎಂಬಾತ ಮದುವೆಯಾಗುವಂತೆ ಕಾಡುತ್ತಿದ್ದ. ಈತನ ಕಾಟ ಹೆಚ್ಚಾಗುತ್ತಿದ್ದಂತೆ ಶೈಲಾ ಬೇರೆ ಕಡೆ ಮನೆ ಮಾಡಿ ವಾಸವಾಗಿದ್ದರು. ಇದರಿಂದ ಕೆರಳಿದ ಚಂದ್ರು ನಿನ್ನನಾಗಲಿ ನಿನ್ನ ಮಗನನ್ನಾಗಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಕ್ಕೆಲ್ಲಾ ಶೈಲಾ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಪಾತಕಿ ಚಂದ್ರು ಮಾತ್ರ ರಾಹುಲ್ ನನ್ನು ಸಾಯಿಸಲು ಹೋಗಿ ತನ್ನ ದುಷ್ಟತನ ತೋರಿಸಿಯೇ ಬಿಟ್ಟಿದ್ದ.
ಇವೆಲ್ಲದರ ಮಧ್ಯೆ 15 ವರ್ಷದ ಬಾಲಕ ಉತ್ತಮ್ ಸಮಯ ಪ್ರಜ್ಞೆಯಿಂದ ರಾಹುಲ್ ಬದುಕಿ ಉಳಿಯುವಂತಾಯಿತು. ಇವಾಗ ಅರಸಿಕೆರೆ ರೈಲ್ವೆ ಪೋಲಿಸರು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಂದ್ರುವಿನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ನಾಟಕ
Comments are closed.