ಕರ್ನಾಟಕ

ರಾಮಚಂದ್ರಾಪುರ ಮಠದಿಂದ ಮುಖ್ಯಮಂತ್ರಿಗೆ ಪತ್ರ

Pinterest LinkedIn Tumblr

shree-raghaveshwara-bharathಬೆಂಗಳೂರು: ರಾಮಚಂದ್ರಾಪುರ ಮಠದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತೆರೆದ ಪತ್ರವನ್ನು ಬರೆದು ಕಳಸುಹಿಸಲಾಗಿದೆ.

ಮಾಧ್ಯಮದ ಮುಂದೆ ಮುಖ್ಯಮಂತ್ರಿಗಳು ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಸ್ತಾಪವಿಲ್ಲ ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ಮರಳಿ ಪಡೆಯುವ ಪ್ರಸ್ತಾಪವಿಲ್ಲವೆಂದು ಹೇಳಿದ್ದಾರೆ. ಅದ್ರೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಮಠಕ್ಕೆ ಐದು ಬಾರಿ ನೋಟಿಸ್ ಬಂದಿದೆ. ಹಾಗೂ ರಾಜ್ಯಸರ್ಕಾರದ ಅಡ್ಟೋಕೇಟ್ ಜನರಲ್ ಕರ್ನಾಟಕ ಸರ್ಕಾರಕ್ಕೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಹಿಂದೆ ಪಡೆಯುವ ಇರಾದೆಯನ್ನು ಹೈಕೋರ್ಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯನವರು ಒಂದು ಕಡೆ ಆಡಳಿತಾಧಿಕಾರಿ ನೇಮಕ ಮಾಡುವುದಿಲ್ಲ ಎಂದು ಹೇಳಿದರೆ ಮತ್ತೊಂದು ಕಡೆ ಸರ್ಕಾರದಿಂದಲೇ ಪತ್ರ ಬಂದಿರುವುದರಿಂದ ಯಾವುದನ್ನು ನಂಬಬೇಕು ಆಂತಾ ಮುಖ್ಯಮಂತ್ರಿಗಳಿಗೆ ಮಠದಿಂದ ತೆರದ ಪತ್ರ ಬರೆಯಲಾಗಿದೆ.

ಮುಖ್ಯಮಂತ್ರಿಗಳು ಹಾಗೂ ಮುಜಾರಾಯಿ ಸಚಿವರ ಗಮನಕ್ಕೆ ತರದೇ ಮುಖ್ಯಕಾರ್ಯದರ್ಶಿಗಳು ಹಾಗೂ ಅಡ್ವೋಕೇಟ್ ಜನರಲ್ ಈ ಬಗೆಯ ಮಹತ್ವದ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದಾರಾ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಅಷ್ಟೇ ಅಲ್ಲದೇ ಸಿಎಂ ತಾವು ಮಾಧ್ಯಮದ ಮುಂದೆ ಹೇಳಿರುವ ಹೇಳಿಕೆಯನ್ನು ತಮ್ಮ ಮುಖ್ಯಕಾರ್ಯದರ್ಶಿ ಮೂಲಕ ಲಿಖಿತ ರೂಪದಲ್ಲಿ ತರುವಂತೆ ತೆರೆದ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.

Comments are closed.