ಕ್ರೀಡೆ

ಹೊಸ ಮೈಲಿಗಲ್ಲನ್ನು ಬರೆದ ಸ್ಪಿನ್ನರ್ ಅಶ್ವಿನ್

Pinterest LinkedIn Tumblr

ashwinಇಂದೋರ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸ್ಪಿನ್ನರ್ ಆರ್ ಅಶ್ವಿನ್ ಹೊಸ ಮೈಲಿಗಲ್ಲನ್ನು ಬರೆದಿದ್ದಾರೆ. ಭಾರತದ ಪರ ಅತಿ ಕಡಿಮೆ ಟೆಸ್ಟ್ ಪಂದ್ಯದಲ್ಲಿ 20 ಬಾರಿ 5 ವಿಕೆಟ್ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ.

ಅಶ್ವಿನ್ ಮೂರು ಪಂದ್ಯಗಳ ಸರಣಿಯಲ್ಲಿ ಒಟ್ಟು 27 ವಿಕೆಟ್ ಪಡೆಯುವ ಮೂಲಕ 39 ಟೆಸ್ಟ್ನಲ್ಲಿ 20 ಬಾರಿ 5 ವಿಕೆಟ್ ಸಂಪಾದಿಸಿದ್ದಾರೆ. ಈ ಸಾಧನೆಯಿಂದಾಗಿ ವಿಶ್ವದ ಟೆಸ್ಟ್ ಬೌಲರ್‍ಗಳ ಪೈಕಿ ಕಡಿಮೆ ಪಂದ್ಯದಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಅಶ್ವಿನ್ ಆಗಿದ್ದಾರೆ.

ಇಂಗ್ಲೆಂಡ್‍ನ ಸಿಡ್ನಿ ಬ್ರಾನ್ಸ್ 25ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾದ ಕ್ಲಾರ್ ಗ್ರಿಮಿಟ್ 37ನೇ ಪಂದ್ಯದಲ್ಲಿ 5 ಬಾರಿ 20 ವಿಕೆಟ್ ಪಡೆದಿದ್ದಾರೆ.

ಟಾಪ್ ಭಾರತೀಯ ಆಟಗಾರರು:
132 ಪಂದ್ಯವಾಡಿರುವ ಅನಿಲ್ ಕುಬ್ಳೆ 35 ಬಾರಿ 5 ವಿಕೆಟ್ ಪಡೆದಿದ್ದರೆ, ಹರ್ಭಜನ್ ಸಿಂಗ್ 103 ಪಂದ್ಯಗಳನ್ನು ಆಡಿ 25 ಬಾರಿ 5 ವಿಕೆಟ್ ಕಿತ್ತಿದ್ದಾರೆ. ಕಪಿಲ್ ದೇವ್ 131 ಪಂದ್ಯವಾಡಿ 23 ಬಾರಿ 5 ವಿಕೆಟ್ ಪಡೆದಿದ್ದಾರೆ.

ಅಶ್ವಿನ್ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‍ನಲ್ಲಿ 10(4+6) ವಿಕೆಟ್, ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್‍ನಲ್ಲಿ 4 (1+3) ವಿಕೆಟ್, ಇಂದೋರ್‍ನಲ್ಲಿ ನಡೆದ ಕೊನೆಯ ಟೆಸ್ಟ್‍ನಲ್ಲಿ 13 (6+7) ವಿಕೆಟ್ ಪಡೆಯುವ ಮೂಲಕ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದÀ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಹರ್ಭಜನ್ ಸಿಂಗ್ 2001ರಲ್ಲಿ ಭಾರತದ ನಡೆದ ಗಾವಸ್ಕರ್ ಬಾರ್ಡರ್ ಟೆಸ್ಟ್ ಸರಣಿಯಲ್ಲಿ 32 ವಿಕೆಟ್‍ಗಳನ್ನು ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಿಂದ ಜಯಿಸಿತ್ತು.

ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಕೇನೆ ವಿಲಿಯಮ್ಸ್ ಅವರನ್ನು ಔಟ್ ಮಾಡುವ ಮೂಲಕ ವೇಗವಾಗಿ 200ನೇ ವಿಕೆಟ್ ಸಂಪಾದಿಸಿದ ವಿಶ್ವದ ಎರಡನೇ ಬೌಲರ್ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೇನೆ ವಿಲಯಮ್ಸ್ ಅವರನ್ನು ಎಲ್‍ಬಿ ಬಲೆಗೆ ಕೆಡವುದರ ಮೂಲಕ ಅಶ್ವಿನ್ 37ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ವಾಕರ್ ಯೂನಿಸ್ ಮತ್ತು ಆಸ್ಟ್ರೇಲಿಯಾದ ಡೆನ್ನೀಸ್ ಲಿಲ್ಲಿ 38 ಪಂದ್ಯದಲ್ಲಿ 200 ವಿಕೆಟ್ ಪಡೆದಿದ್ದರು.

ಟೆಸ್ಟ್ ಕ್ರಿಕೆಟ್‍ನಲ್ಲಿ ಕಡಿಮೆ ಪಂದ್ಯದಲ್ಲಿ 200 ವಿಕೆಟ್ ಕಿತ್ತ ದಾಖಲೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್, ಕ್ಲಾರೆ ಗ್ರಿಮೆಟ್ ಹೆಸರಿನಲ್ಲಿದ್ದು 36 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

Comments are closed.