ಕರ್ನಾಟಕ

ಅರಮನೆಯಲ್ಲಿ ರಾಜ ವಂಶಸ್ಥರಿಂದ ಆಯುಧ ಪೂಜೆ

Pinterest LinkedIn Tumblr

mysoreಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಒಂದು ದಿನ ಬಾಕಿ ಇದ್ದು, ಮುನ್ನಾ ದಿನ ಸೋಮವಾರ ಅರಮನೆಯ ಅಂಬಾವಿಲಾಸ ದರ್ಬಾರ್ ಹಾಲ್‌ನಲ್ಲಿ ಆಯುಧ ಪೂಜೆ ಕೈಂಕರ್ಯ ನೆರವೇರಿಸಲಾಯಿತು.

ರಾಜ ಪರಿವಾರದ ಖಾಸಗಿ ಆಯುಧಗಳು ಹಾಗೂ ಪಟ್ಟದ ಆನೆ, ಒಂಟೆ, ಕುದುರೆ, ಹಸು ಹಾಗೂ ರಾಜರು ವಂಶಸ್ಥರು ಬಳಸಿದ್ದ ಹಾಗೂ ಬಳಸುತ್ತಿರುವ ವಾಹನಗಳಿಗೆ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರು ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದ 6.15ಕ್ಕೆ ಚಂಡಿ ಹೋಮ ನೆರವೇರಿಸಲಾಯಿತು. 6.30ಕ್ಕೆ ಅರಮನೆ ಆನೆ ಬಾಗಿಲಿನಲ್ಲಿ ಪ್ರಾಣಿಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರಾಣಿಗಳನ್ನು 6.50ಕ್ಕೆ ಕೋಡಿ ಸೋಮೇಶ್ವರ ದೇಗುಲಕ್ಕೆ ಕಳುಹಿಸಲಾಯಿತು. 7.25ಕ್ಕೆ ಖಾಸಗಿ ಆಯುಧಗಳನ್ನು ಕಲ್ಯಾಣಮಂಟಪಕ್ಕೆ ತರಲಾಯಿತು. 8ಕ್ಕೆ ಚಂಡಿ ಹೋಮದ ಪೂರ್ಣಾಹುತಿ ನಡೆಯಿತು. 9.45ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು.

ರಾಜ ಪರಿವಾರ ಮತ್ತು ಸಂಬಂದಿಗಳು ಹಾಗೂ ದರ್ಬಾರ್‌ ಭಕ್ಷಿಗಳು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದರು.

Comments are closed.