ಕರ್ನಾಟಕ

ಮಾದಕ ವಸ್ತು ಸೇವಿಸಿ ರಸ್ತೆಯಲ್ಲಿ ಬಿದ್ದು ಒದ್ದಾಡಿದ ಯುವತಿ

Pinterest LinkedIn Tumblr

kudiಚಿಕ್ಕಮಗಳೂರು: ಮದ್ಯ, ಗಾಂಜಾ ಅಥವಾ ಇನ್ಯಾವುದೋ ಮಾದಕ ವಸ್ತು ಸೇವಿಸಿ ಯುವತಿಯೊರ್ವಳು ರಸ್ತೆ ಮಧ್ಯೆ ಬಿದ್ದು ಹೊರಳಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯಲ್ಲಿ ನಡೆದಿದೆ.

ಈ ವಿಡಿಯೋ ಕಾಫಿನಾಡಿನಾದ್ಯಂತ ವಾಟ್ಸಪ್‍ನಲ್ಲಿ ಹರಿದಾಡ್ತಿದೆ. ಕಾಫಿನಾಡಿನ ಪ್ರವಾಸಿ ತಾಣಕ್ಕೆ ಹೋಗಿದ್ದ ಯುವತಿಯರ ತಂಡ ಡ್ರಿಂಕ್ಸ್, ಗಾಂಜಾ ಯಾವುದನ್ನ ಸೇವಿಸಿದೆ ಎನ್ನುವುದು ತಿಳಿದು ಬಂದಿಲ್ಲ. ಆದ್ರೆ, ಬೈಕ್‍ನಲ್ಲಿ ಬರುವಾಗ ರಸ್ತೆ ಮಧ್ಯೆಯೇ ಯುವತಿಯೊಬ್ಬಳು ಬಿದ್ದಿದ್ದಾಳೆ. ಬಿದ್ದ ಯುವತಿಗೆ ಮೇಲೇಳಲು ಸಾಧ್ಯವಾಗದೆ ರಸ್ತೆಯಲ್ಲೇ ಹೊರಳಾಡಿ ಮತ್ತೆ ಮಲಗೋದನ್ನ ಕಂಡು ಈಕೆ ಗಾಂಜಾ ಸೇವಿಸಿದ್ದಾಳೆಂದು ಸ್ಥಳೀಯರು ಮಾತನಾಡಿಕೊಂಡಿದ್ದಾರೆ.

ಈ ಘಟನೆ ಯಾವತ್ತು ನಡೆದಿದ್ದು ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದ್ರೆ, ಈ ವಿಡಿಯೋ ಕಾಫಿನಾಡಿಗರನ್ನ ಗಾಬರಿಗೊಳಿಸಿದೆ.

Comments are closed.