ಕರ್ನಾಟಕ

ಡಿನೋಟಿಫಿಕೇಶನ್ ಪ್ರಕರಣ: ಯಡಿಯೂರಪ್ಪ ವಿರುದ್ಧ ದೂರು

Pinterest LinkedIn Tumblr

yaddiಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾನೂನು ಬಾಹಿರ ಡಿನೋಟಿಫಿಕೇಶನ್ ಆರೋಪದಡಿಯಲ್ಲಿ ವಕೀಲ ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ಖಾಸಗಿ ದೂರು ದಾಖಲಿಸಿದ್ದಾರೆ.

ಸಿರಾಜಿನ್ ಬಾಷಾ ಅವರು ಈ ಹಿಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತನಿಖೆ ನಡೆಸಲು ಪೂರ್ವಾನುಮತಿ ನೀಡಿದ್ದ ಕಾರಣ ಬಿಎಸ್‍ವೈ ಮೇಲಿದ್ದ ಪ್ರಕರಣವನ್ನು ಹೈಕೋರ್ಟ್ 2015ರ ನವೆಂಬರ್‍ನಲ್ಲಿ ರದ್ದುಗೊಳಿಸಿತ್ತು.

ಇದಾದ ಬಳಿಕ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಆಗಿರುವ ಕಾರಣ ಅನುಮತಿಯ ಅಗತ್ಯವಿಲ್ಲ ಎಂದು ಈಗಿನ ರಾಜ್ಯಪಾಲ ವಿಆರ್‍ವಾಲ ತಿಳಿಸಿದ್ದರಿಂದ ಸಿರಾಜಿನ್ ಭಾಷಾ ಮತ್ತೊಮ್ಮೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ.

ಹೈಕೋರ್ಟ್ ರದ್ದುಪಡಿಸಿರುವ 5 ಪ್ರಕರಣವನ್ನು ಪ್ರಶ್ನಿಸಿ ಸಿರಾಜಿನ್ ಭಾಷಾ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಅ.27ಕ್ಕೆ ನಡೆಯಲಿದೆ.

Comments are closed.