ಕರ್ನಾಟಕ

ಸೇನಾ ಲಾರಿಗೆ ಬೆಂಕಿ

Pinterest LinkedIn Tumblr

seneಬೆಂಗಳೂರು, ಅ. ೪- ಸೇನಾ ಲಾರಿಗೆ ಬೆಂಕಿ ಹಾಗೂ ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಎರಡು ಬೆಂಕಿ ಅಕಸ್ಮಿಕ ಘಟನೆಗಳು ವರದಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು- ನೋವುಗಳು ಸಂಭವಿಸಿಲ್ಲ.
ಹೊಸೂರು ರಸ್ತೆಯ ಬೊಮ್ಮನಹಳ್ಳಿ ಮಲ್ಸೇತುವೆ ಕೆಳಗೆ ತೆರಳುತ್ತಿದ್ದ ಸೇನೆಗೆ ಸೇರಿದ ಟ್ರಕ್‌‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದ್ದು, ತಕ್ಷಣವೇ ಚಾಲಕ ಟ್ರಕ್ ನಿಂದ ಕೆಳಗೆ ಇಳಿದು ಪಾರಾಗಿದ್ದಾರೆ. ಈ ಬೆಂಕಿ ಅಕಸ್ಮಿಕದ ಬಗ್ಗೆ ಮಾಹಿತಿ ತಿಳಿದ ಅಗ್ನಿ ಶಾಮಕ ಪಡೆಯ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದ್ದು, ಟ್ರಕ್ ಭಾಗಶಃ ಸುಟ್ಟಿದೆ.
ಈ ಬೆಂಕಿ ಆಕಸ್ಮಿಕದ ಪ್ರಕರಣದಿಂದ ಹೊಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ದಟ್ಟವಾದ ಹೊಗೆಯೂ ಆವರಿಸಿತ್ತು. ಸಕಾಲದಲ್ಲಿ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾಹುತವನ್ನು ತಪ್ಪಿಸಿವೆ.
ಸೇನಾ ಟ್ರಕ್ ನಲ್ಲಿ ಸೇನಾಧಿಕಾರಿಯೊಬ್ಬರ ಮನೆ ಖಾಲಿ ಮಾಡಿ ಮನೆಯ ವಸ್ತುಗಳನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಂಪಿಂಗ್ ಯಾರ್ಡ್‌ಗೆ ಬೆಂಕಿ
ಮಾಗಡಿ ರಸ್ತೆಯ ಸೀಬೆಹಳ್ಳಿ ಗೇಟ್ ಬಳಿ ಇರುವ ಬಿಬಿಎಂಪಿಯ ಕಸ ಸುರಿಯುವ ಪ್ರದೇಶದಲ್ಲಿ ಭಾರಿ ಬೆಂಕಿ ಅಕಸ್ಮಿಕ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ಪಡೆಯ 7 ವಾಹನಗಳು ಸ್ಥಳಕ್ಕೆ ತೆರಳಿ ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.
ಇಂದು ಬೆಳಿಗ್ಗೆ ಈ ಕಸ ಸುರಿಯುವ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಜಾಗದ ಸುತ್ತಮುತ್ತ ದಟ್ಟ ಹೊಗೆ ತುಂಬಿತ್ತು.
ಈ ಬೆಂಕಿ ಆಕಸ್ಮಿಕದಲ್ಲಿ ಯಾವುದೇ ಸಾವು- ನೋವು ವರದಿಯಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಕಸಕ್ಕೆ ಬೆಂಕಿ ಬಿದ್ದಿರುವುದರಿಂದ ಬೆಂಕಿ ನಂದಿಸುವ ಕಾರ್ಯ ಸಂಜೆಯವರೆಗೂ ನಡೆಯಲಿದೆ.

Comments are closed.