ನವದೆಹಲಿ: ಕರ್ನಾಟಕ ಅ.7ರಿಂದ 18ರವರೆಗೆ ದಿನಂಪ್ರತಿ 2 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಮಂಗಳವಾರ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ಸಧ್ಯಕ್ಕೆ ತಡೆಹಿಡಿದು ಉನ್ನತಾಧಿಕಾರವುಳ್ಳ ತಾಂತ್ರಿಕ ತಂಡ ರಚನೆಗೆ ಅಸ್ತು ಎಂದಿದೆ. ಕಾವೇರಿ ಮೇಲುಸ್ತುವಾರಿ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಿಸಿ ವಾಸ್ತವ ಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿತು.
ಕಾವೇರಿ ನಿವರ್ಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂಕೋರ್ಟ್ಗೆ ಇಲ್ಲ ಎಂದು ತಿಳಿಸಿರುವ ಕೇಂದ್ರ ಸರ್ಕಾರ, ಸೆ. 20 ಮತ್ತು 30ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಸೋಮವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ, ಕೇಂದ್ರ ಸರ್ಕಾರದ ಮನವಿ ಅಸ್ತು ಎಂದಿದೆ.
ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಕೇಂದ್ರ ಜಲ ಆಯೋಗದ ಸದಸ್ಯ ಮಸೂದ್ ಹುಸೇನ್ ಅವರನ್ನು ನೇಮಕ ಮಾಡಿದ್ದು, ತಂಡ ಎರಡೂ ರಾಜ್ಯಗಳಿಗೆ ಭೇಟಿ ನೀಡಲಿದೆ. ವಾಸ್ತವ ಸ್ಥಿತಿ ಅಧ್ಯಯನ ನಡೆಸಿ, ಅ. 17ರಂದು ವರದಿ ನೀಡಲು ಸೂಚನೆ ನೀಡಿದೆ. ಅ. 18ಕ್ಕೆ ವಿಚಾರಣೆ ನಡೆಯಲಿದೆ.
ಜಿ.ಎಸ್. ಝಾ ನೇತೃತ್ವದದಲ್ಲಿ ತಾಂತ್ರಿಕ ಉನ್ನತಾಧಿಕಾರ ತಂಡ ರಚನೆಗೆ ಸುಪ್ರೀಂ ಅಸ್ತು ಎಂದಿದ್ದು, ತಾಂತ್ರಿಕ ಸಮಿತಿಯಲ್ಲಿ ನಾಲ್ಕು ರಾಜ್ಯಗಳ ಮುಖ್ಯ ಎಂಜಿಯರ್ಗಳು ಇರುತ್ತಾರೆ.
ಸೆ. 20 ಮತ್ತು 30ರಂದು ಆದೇಶದಲ್ಲಿ ನೀಡಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ಸುಪ್ರೀಂ ಸಧ್ಯಕ್ಕೆ ತಡೆ ಹಿಡಿದಿದೆ.
Comments are closed.