ಕರ್ನಾಟಕ

ತುಂಬಾ ಬುದ್ದಿವಂತ ವಿದ್ಯಾರ್ಥಿಗೆ ಬಿಸಿಯೂಟವೇ ಮೂರು ಹೊತ್ತಿನ ಊಟ

Pinterest LinkedIn Tumblr

belaku-cngಚಾಮರಾಜನಗರ: ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಬ ಬಹಳ ಬುದ್ದಿವಂತ ಮತ್ತು ವಿದ್ಯಾವಂತ ಈತನ ಬದುಕು ಬಹಳ ದುಸ್ಥಿರವಾಗಿದೆ. ಅತ್ತ ತಂದೆ ಚಿಕ್ಕಮಗುವಾಗಿದ್ದಾಗಲೇ ಮೃತಪಟ್ಟಿದ್ದಾರೆ ಇನ್ನು ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈತನಿಗೆ ಮಧ್ಯಾಹ್ನ ಶಾಲೆಯಲ್ಲಿ ಸಿಗುವ ಬಿಸಿಯೂಟವೇ ಮೂರು ಹೊತ್ತಿನ ಊಟವಾಗಿದ್ದು ಈ ಬಡ ಬಾಲಕನಿಗೆ ಯಾರಾದ್ರೂ ಸಹಾಯ ಹಸ್ತ ಚಾಚಬೇಕಿದೆ.

ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಎಂಬ ಗ್ರಾಮದ ದರ್ಶನ್ ಎಂಬ ಬಾಲಕ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತನ ವಿದ್ಯಾಭ್ಯಾಸಕ್ಕೆ ನೆರವು ಬೇಕಿದೆ. ಈತ ಬಹಳ ಬುದ್ದಿವಂತನಾಗಿದ್ದು, ಬಹಳ ಚೆನ್ನಾಗಿ ಓದುತ್ತಿದ್ದಾನೆ. ಆದ್ರೆ ಈತ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಕ್ಯಾನ್ಸರ್ ರೋಗ ಬಂದು ಈತನ ತದೆ ಮೃತಪಟ್ಟಿದ್ದಾರೆ. ಆದ್ರೆ ಈತನ ತಾಯಿ ಕೂಡ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಅನಾರೋಗ್ಯಕ್ಕೀಡಾಗಿದ್ದಾರೆ. ಇವರು ಯಾವುದೇ ಕೆಲಸ ಮಾಡಲು ಆಗುವುದಿಲ್ಲ, ಈತ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ.

ಈ ಕುಟುಂಬಕ್ಕೆ ವಾಸಿಸಲು ಮನೆಯೂ ಇಲ್ಲ ಈತನ ತಾಯಿ ಮಂಡ್ಯಜಿಲ್ಲೆಗೆ ಮದುವೆಯಾಗಿದ್ದು, ಈ ಬಾಲಕ ಒಂದು ವರ್ಷದ ಮಗುವಾಗಿದ್ದಾಗಲೇ ಈತನ ತಂದೆ ಮೃತಪಟ್ಟಿದ್ದಾರೆ. ಆಗ ಈತನ ತಾಯಿ 13 ವರ್ಷದ ಹಿಂದೆ ತನ್ನ ಮಗುವನ್ನು ಸಾಕಲು ತಮ್ಮ ತಂದೆಯ ಮನೆಯಾದ ಉಮ್ಮತ್ತೂರಿಗೆ ಬಂದು ತನ್ನ ತಂಗಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.

ದರ್ಶನ್ ಚಿಕ್ಕಮ್ಮ ಮದೆಯಾಗದೇ ಇವರಿಬ್ಬರ ಹಾರೈಕೆಯಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ಕೂಲಿ ಕೆಲಸ ಮಾಡಿಕೊಂಡು ಬಂದು ಅಲ್ಲಿಂದ ಬಂದ ಹಣದಿಂದ ಇವರಿಬ್ಬರನ್ನು ಸಾಕುತ್ತಿದ್ದಾರೆ. ಒಂದು ಚಿಕ್ಕ ಮನೆಯಲ್ಲಿ ವಾಸ ಮಾಡುತ್ತಿದ್ದು, ಯಾವುದೇ ಆಸ್ತಿಪಾಸ್ತಿಯಾಗಲೀ ಮನೆಯಾಗಲೀ ಇಲ್ಲ. ಈ ಬಾಲಕ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕಿ ಸುಪ್ರಿಯಾ ಈತನಿಗೆ ಕೆಲ ಸಮಯ ಬೆಳಿಗ್ಗೆ ಮತ್ತು ರಾತ್ರಿಯೂಟ ನೀಡುತ್ತಿದ್ದಾರೆ. ಮನೆಯಲ್ಲಿ ಊಟ ಇದ್ದರೆ ಊಟಮಾಡುತ್ತಾನೆ ಇಲ್ಲದಿದ್ದರೆ ಹಸಿವಿನಿಂದಲೇ ಶಾಲೆಗೆ ಹೋಗುತ್ತಾನೆ ಮತ್ತು ಮಧ್ಯಾಹ್ನದ ಬಿಸಿಯೂಟವನ್ನೇ ರಾತ್ರಿಗೆ ಉಳಿಸಿಕೊಂಡು ಆ ಅನ್ನವನ್ನೇ ರಾತ್ರಿ ತಿನ್ನುತ್ತಾನೆ ಅಂತಹ ಕಿತ್ತುತಿನ್ನುವ ಬಡತನ ಈ ಬಾಲಕನಿಗಿದೆ.

ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ವಿದ್ಯೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಮುಂದಾಗಿದ್ದಾನೆ ಈತನ ವಿದ್ಯಾಭ್ಯಾಸಕ್ಕೆ ನೆರವು ಬೇಕಿದೆ. ಈ ಬಾಲಕ ಮುಂದೆ ಐಎಎಸ್ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದಾನೆ ಈತನ ಆಸೆ ಈಡೇರಲೆಂದು ಆಶಿಸೋಣ.

Comments are closed.