ಕರ್ನಾಟಕ

ಮಕ್ಕಳ ದಸರಾ ರಾಜಾದಿನಗಳಲ್ಲಿ 5 ದಿನ ಮೊಟಕುಗೊಳಿಸಿದ ಶಿಕ್ಷಣ ಇಲಾಖೆ

Pinterest LinkedIn Tumblr

dasara

ಬೆಂಗಳೂರು: ಕಾವೇರಿ, ಮಹದಾಯಿ ವಿಚಾರಗಳಿಗೆ ಉಂಟಾದ ಗಲಭೆ, ಬಂದ್‌ಗಳ ಪರಿಣಾಮ ಶಾಲಾ ಕಾಲೇಜುಗಳಿಗೆ ಹೆಚ್ಚು ರಜೆ ನೀಡಲಾದ ಕಾರಣ ದಸರಾ ರಜೆಯನ್ನು 5 ದಿನಗಳಷ್ಟು ಮೊಟಕು ಮಾಡಲಾಗುತ್ತಿದೆ.

ಈ ಕುರಿತು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು ವಿದ್ಯಾರ್ಥಿಗಳ ಹಿತಕಾಯುವ ಉದ್ದೇಶದಿಂದ ಕೆಲ ಸರ್ಕಾರಿ ರಜಾ ದಿನಗಳಂದು ಕೂಡ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪದೇಪದೆ ಮುಷ್ಕರ, ಪ್ರತಿಭಟನೆ, ಬಂದ್‌ಗಳು ಎದುರಾದ್ದರಿಂದ ನಿಗದಿತ ಅವಧಿಯಲ್ಲಿ ಪಠ್ಯ ಪೂರ್ಣವಾಗುತ್ತವೆಯೋ ಇಲ್ಲವೋ ಎಂಬ ಆತಂಕ ವಿದ್ಯಾರ್ಥಿಗಳು, ಪೋಷಕರಲ್ಲಿ ಎದುರಾಗಿತ್ತು.

ಶನಿವಾರದಂದು ಪೂರ್ಣ ತರಗತಿಗಳನ್ನು ತೆಗೆದುಕೊಳ್ಳಲು ಇಲಾಖೆ ಕ್ರಮ ತೆಗೆದುಕೊಂಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಸಹ ದಸರಾ ರಜೆಯ ಅವಧಿಯನ್ನು ಕಡಿತಗೊಳಿಸಿದೆ.

ಈ ಮೊದಲು ಅಕ್ಟೋಬರ್‌ 8ರಿಂದ 28ರವರೆಗೆ ರಜೆ ನಿಗದಿಯಾಗಿತ್ತು. ಅದನ್ನು ಐದು ದಿನ ಕಡಿಮೆ ಮಾಡಲಾಗಿದೆ. ಅಕ್ಟೋಬರ್‌ 23ರಿಂದಲೇ ತರಗತಿಗಳು ಪುನರಾರಂಭವಾಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಿ.ಯು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

Comments are closed.