ಕರ್ನಾಟಕ

ರಸ್ತೆ ದಾಟುತ್ತಿದ್ದವನಿಗೆ ಡಿಕ್ಕಿ ಹೊಡೆದ ಕಾರು…ನಿಲ್ಲಿಸದೇ ಬಾನೆಟ್ ಮೇಲಿದ್ದ ಶವವನ್ನು ಸುಮಾರು ಎರಡೂವರೆ ಕಿ.ಮೀ ದೂರ ಹೊತ್ತೊಯ್ದ ಚಾಲಕ !

Pinterest LinkedIn Tumblr

accidents

ಮೆಹಬೂಬ ನಗರ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಚಾಲಕ ಕಾರು ನಿಲ್ಲಿಸದೇ ಬಾನೆಟ್ ಮೇಲಿದ್ದ ಶವವನ್ನು ಸುಮಾರು ಎರಡೂವರೆ ಕಿ.ಮೀ ದೂರ ಹೊತ್ತೊಯ್ದ ಘಟನೆ ಹೈದರಾಬಾದ್ ನ ಜಡ್ಚೆರ್ಲಾದಲ್ಲಿ ನಡೆದಿದೆ.

ಕರ್ನೂಲ್ ನಿಂದ ಹೈದರಾಬಾದ್ ಗೆ ಬರುತ್ತಿದ್ದ ಕಾರಿನಲ್ಲಿದ್ದ ಅಪರಿಚಿತ ಚಾಲಕ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಾನೆಟ್ ಮೇಲಿದ್ದ ಶವವನ್ನು ಇಳಿಸಿದೇ ಸುಮಾರು ಎರಡೂವರೆ ಕಿಮೀ ವರೆಗೂ ಕೊಂಡೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವನನ್ನು ನಿಂಬಾಯಿಗಡ್ಡ ನಿವಾಸಿ ಸ್ರೀನು ಎಂದು ತಿಳಿದು ಬಂದಿದೆ. ಸ್ರೀನು ಸ್ಥಳೀಯ ಕಬ್ಬಿಣದ ಅಂಗಡಿಯೊಂದರಲ್ಲಿ ದಿನಗೂಲಿ ನೌಕರನಾಗಿದ್ದ. ಸ್ರೀನು ಗೆ ಡಿಕ್ಕಿ ಹೊಡೆದ ಕಾರನ್ನು ಸ್ಥಳೀಯ ಯುವಕರು ತಮ್ಮ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಅಪಘಾತ ನಡೆದ ಸ್ಥಳದಿಂದ ಸುಮಾರು ಎರಡೂವರೆ ಕಿಮೀ ದೂರದಲ್ಲಿ ಕಾರು ನಿಲ್ಲಿಸಿ ಚಾಲಕ ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಕಾರನ್ನು ಪರಿಶೀಲನೆ ನಡೆಸಿದಾಗ ಅದು ಹೈದರಾಬಾದ್ ನ ನಿವಾಸಿ ಚಂದ್ರಕಲಾ ಎಂಬುವರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ವಿಳಾಸ ಪಡೆದು ಪೊಲೀಸರು ಚಂದ್ರಕಲಾ ಮನೆಗೆ ಭೇಟಿ ನೀಡಿದ್ದರು. ಆದರೆ ಘಟನೆ ನಂತರ ಚಂದ್ರಕಲಾ ತಮ್ಮ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

Comments are closed.