ಕರ್ನಾಟಕ

ವೇಶ್ಯಾವಾಟಿಕೆ ದಂಧೆ: ಶಾಸಕನ ಪುತ್ರನ ಬಂಧನ

Pinterest LinkedIn Tumblr

ve
ಮಡಿಕೇರಿ: ಹೋಂ ಸ್ಟೇಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎನ್ನುವ ಆರೋಪದ ಮೇಲೆ ಮಡಿಕೇರಿ ಜಿಲ್ಲೆಯ ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪುತ್ರ ರಾಜೀವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕುಶಾಲನಗರದ ಕೂರ್ಗ್ ರಿವರ್ ವ್ಯಾಲಿ ಹೋಂ ಸ್ಟೇಯಲ್ಲಿ ಮಾಲೀಕ ಪ್ರಸನ್ನ, ಮಧು ಸೇರಿದಂತೆ ರಾಜೀವ್ ಎನ್ನುವವರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಈ ಕುರಿತು ಖಚಿತ ಮಾಹಿತಿ ಮೇರಿಗೆ ಕುಶಾಲನಗರ ಇನ್‌ಸ್ಪೆಕ್ಟರ್ ಕ್ಯಾತೇಗೌಡ ಹಾಗೂ ಗ್ರಾಮಾಂತರ ಎಸ್‌ಐ ಮಹೇಶ್ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ವೇಶ್ಯಾವಾಟಿಕೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.