ಬೆಂಗಳೂರು, ಸೆ. ೧೪- ನಗರದ ಓರಾಯನ್ ಮಾಲ್ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ ಎನ್ನುವ ಕುರಿತಾದ ಸರ್ವೆ ವರದಿ ಇನ್ನೂ ಕೈ ಸೇರಿಲ್ಲ ಎಂದು ಮೇಯರ್ ಮಂಜುನಾಥರೆಡ್ಡಿ ಇಂದು ಇಲ್ಲಿ ಹೇಳಿದ್ದಾರೆ.
ಸರ್ವೆ ವರದಿ ಬಂದ ನಂತರ ಪರಿಶೀಲಿಸಿ ತಪ್ಪೆಸಗಿದರೆ ಓರಾಯನ್ ಮಾಲ್ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಐಡಿಪಿ ಸಾಲಪ್ಪ ಅವರ 20ನೇ ವರ್ಷದ ಪುಣ್ಯಜಯಂತಿ ಅಂಗವಾಗಿ ಪ್ರತಿನಿಧಿ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು ರಾಜಕಾಲುವೆ ಒತ್ತುವರಿ ತೆರವುಮಾಡಿಕೊಂಡಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುವುದು. ಇದರಲ್ಲಿ ಯಾವುದೇ ಮುಲಾಜು ನೋಡುವುದಿಲ್ಲ ಎಂದು ಹೇಳಿದರು.
ಪೌರ ಕಾರ್ಮಿಕರ ನಾಯಕ ಐ.ಪಿ.ಡಿ. ಸಾಲಪ್ಪ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿದ ಧೀಮಂತ ನಾಯಕ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪೌರ ಕಾರ್ಮಿಕರ ಬಹುತೇಕ ಸಮಸ್ಯೆಗಳು ಕಂಡುಕೊಳ್ಳುವಲ್ಲಿ ಶ್ರಮಿಸಿದ್ದಾರೆ ಎಂದರು.
ಐ.ಪಿ.ಡಿ. ಸಾಲಪ್ಪರವರ ಹೆಸರನ್ನು ಅಮರವಾಗಿಸಲು ಅವರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಪ್ರತಿ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಐ.ಪಿ.ಡಿ. ಸಾಲಪ್ಪರವರನ್ನು ಕರ್ನಾಟಕದ ಅಂಬೇಡ್ಕರ್ ಎಂದರೆ ತಪ್ಪಾಗಲಾರದು. ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟವರು ಎಂದರು.
ರಾಷ್ಟ್ರಮಟ್ಟದಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಎತ್ತಿ ಹಿಡಿದು ಸಫಾಯಿ ಕರ್ಮಚಾರಿ ಆಯೋಗದ ರಚನೆಗೆ ಕಾರಣಕರ್ತರಾದವರು ಎಂದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಹಾಗೂ ಸಾಲಪ್ಪರವರ ಪುತ್ರ ಅಶೋಕ್ ಸಾಲಪ್ಪ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಕರ್ನಾಟಕ
Comments are closed.