ಕರ್ನಾಟಕ

ಪುಟ್ಟ ಮಕ್ಕಳ ಕ್ಯಾಟ್‌ವಾಕ್

Pinterest LinkedIn Tumblr

12catwalk1clr

ಬೆಂಗಳೂರು, ಸೆ ೧೨- ನಗರದ ಇಸ್ರೋ ಬಡಾವಣೆ ಸಮೀಪದ ವಿಠಲ್ ನಗರದಲ್ಲಿ ಗಣೇಶ ಉತ್ಸವದ ಅಂಗವಾಗಿ ನಡೆದ ಕಿಡ್ಸ್ ಫ್ಯಾಷನ್ ಶೋನಲ್ಲಿ ಬಾಲಕಿ ಸಿಂಚನಾ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಪುಟ್ಟ ಮಕ್ಕಳು ರ್‍ಯಾಂಪ್ ಮೇಲೆ ನಡೆಯುತ್ತಿದ್ದಾಗ ನೋಡುಗರು ಚೆಂದದ ಮಕ್ಕಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು. ಅಮೋಘ್ ನೇತೃತ್ವದ ಯುವಕರ ಬಳಗ ಆಯೋಜಿಸಿದ ಕಿಡ್ಸ್ ಫ್ಯಾಷನ್ ಪ್ರದರ್ಶನದಲ್ಲಿ ಕ್ಯಾಟ್ ವಾಕ್ ಎಂದರೆ ಏನು ಎಂದು ತಿಳಿಯದ ಪುಟ್ಟ ಕಂದಮ್ಮಗಳು ಪುಟ್ಟ ಪಾದಗಳಿಟ್ಟು ರೆಡ್ ಕಾರ್ಪೆಟ್ ಮೇಲೆ ಬೆಕ್ಕಿನ ನಡಿಗೆ ಮಾಡುತ್ತಿದ್ದರೇ ಅದನ್ನು ಕಂಡ ಪ್ರೇಕ್ಷಕರು, ಪೋಷಕರು ಅಚ್ಚರಿಗೊಳ್ಳಗಾಗಿದಲ್ಲದೇ, ಮಕ್ಕಳ ತುಂಟ ನಡಿಗೆ ಕಂಡು ನಗೆಯ ಅಲೆಯಲ್ಲಿ ತೇಲಿಹೋದರು.

ಕೈನಲ್ಲಿ ಹಿಡಿದ ತಿಂಡಿ ಬಿಡುವುದಿಲ್ಲ ಎಂದು ಕೆಲ ಪುಟಾಣಿ ಹಠಹಿಡಿದಲ್ಲದೇ, ಅಪ್ಪ ಅಮ್ಮನ ಕೈ ಬಿಟ್ಟು ನಡೆಯುವುದಿಲ್ಲ ಎಂದು ಅಪ್ಪಿಕೊಂಡೇ ನಿಂತಿದ್ದ ಮುದ್ದು ಮಕ್ಕಳನ್ನು ಕಂಡು ಎಲ್ಲಾರು ಸಂತಸಗೊಂಡರು. ಕಾರ್ಯಕ್ರಮದಲ್ಲಿ ಪ್ರತಿಯೊಂದು ಪುಟಾಣಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು.

ಕ್ಯಾಪ್ಶನ್
ನಗರದ ಇಸ್ರೋ ಬಡಾವಣೆ ಸಮೀಪದ ವಿಠಲ್ ನಗರದಲ್ಲಿ ಗಣೇಶ ಉತ್ಸವದ ಅಂಗವಾಗಿ ನಡೆದ ಕಿಡ್ಸ್ ಫ್ಯಾಷನ್ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ ಬಾಲಕಿ ಸಿಂಚನಾ ಅವರಿಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸಾಮೋಜಿ ರಾವ್ ಹಾಗೂ ಪ್ರೊ.ಕೆ.ಮಾಲಿನಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

Comments are closed.