ಕರ್ನಾಟಕ

ಕಾವೇರಿ ಪ್ರತಿಭಟನೆ: ಶಾಲೆ, ಕಾಲೇಜುಗಳು ದಿಢೀರ್‌ ರಜೆ: ವಿದ್ಯಾರ್ಥಿಗಳ ಪರದಾಟ

Pinterest LinkedIn Tumblr

%e0%b2%95%e0%b2%bb%e0%b2%b5%e0%b3%86%e0%b2%b0%e0%b2%afಬೆಂಗಳೂರು: ಕಾವೇರಿ ವಿಷಯವಾಗಿ ನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಹಲವೆಡೆ ಲಾರಿಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆಯುತ್ತಿದ್ದಂತೆ ಶಾಲೆ, ಕಾಲೇಜುಗಳು ಅರ್ಧ ದಿನಕ್ಕೆ ದಿಢೀರ್‌ ರಜೆ ಘೋಷಿಸಿದವು . ಇದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದರು.

ನಗರದ ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ, ನಾಯಂಡಳ್ಳಿ ಬಳಿ ಪ್ರತಿಭಟನೆಗಳು ನಡೆದು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆಯುತ್ತಿದ್ದಂತೆ ಶಾಲೆ, ಕಾಲೇಜುಗಳ ದಿಡೀರ್‌ ರಜೆ ಮಾಡಿದವು. ವಿದ್ಯಾರ್ಥಿಗಳು ಮನೆಗೆ ತೆರಳಲು ಬಸ್‌ ಹಿಡಿಯಲು ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು. ಶಾಲೆ, ಕಾಲೇಜುಗಳ ಬಳಿಯ ಬಸ್‌ನಿಲ್ದಾಣಗಳಲ್ಲಿ ಹಾಗೂ ವಿಜಯನಗರದ ಮುಖ್ಯ ಬಸ್‌ನಿಲ್ದಾಣದಲ್ಲಿ ವಿದ್ಯಾರ್ಥಿಗಳ ದಂಡೇ ನೆರೆದಿತ್ತು.

ಇನ್ನು ಪೋಷಕರು ಮಕ್ಕಳನ್ನು ಮನೆಗೆ ಕರೆತರಲು ದಾವಂತದಲ್ಲಿ ಶಾಲೆಗಳತ್ತ ತೆರಳಿದರು. ಈ ಮಧ್ಯೆ ರಸ್ತೆಗಳಲ್ಲಿ ಬಂದ್‌ ಆಗಿದ್ದರಿಂದ ಪೋಷಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು.

Comments are closed.