ಕರ್ನಾಟಕ

6 ವರ್ಷದ ಹಿಂದಿನ ಕೊಲೆ ರಹಸ್ಯ ಬಯಲು : 6 ಮಂದಿ ಅರೆಸ್ಟ್

Pinterest LinkedIn Tumblr

6-arrestಬೆಂಗಳೂರು, ಸೆ.11-ಅಪಹರಣ, ದರೋಡೆ ಮತ್ತು ಕನ್ನ ಕಳವು ಪ್ರಕರಣಗಳಲ್ಲಿ ಬೇಕಾಗಿದ್ದ ಆರು ಮಂದಿ ಕುಖ್ಯಾತರನ್ನು ಬಂಧಿಸಿರುವ ಕೆಂಗೇರಿ ಠಾಣೆ ಪೊಲೀಸರು, ಆರು ವರ್ಷಗಳ ಹಿಂದೆ ನಡೆದ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಬಳ್ಳಾರಿಯ ಅನಿಲ್ ಕುಮಾರ್ ಅಲಿಯಾಸ್ ಅನಿಲ (32), ದಾವಣಗೆರೆಯ ಸಂತೋಷ್ ನಾಯ್ಕ ಅಲಿಯಾಸ್ ಸಂತೋಷ್ (25), ಎಂ. ರಾಜಪ್ಪ ಅಲಿಯಾಸ್ ರಾಜು (26), ಹಾಸನದ ಮಂಜುನಾಥ ಅಲಿಯಾಸ್ ಮಂಜ (26), ತುಮಕೂರಿನ ಕಾಂತರಾಜ ಅಲಿಯಾಸ್ ಕಾಂತ (22) ಹಾಗೂ ಬಳ್ಳಾರಿಯ ಉಮೇಶ (22) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ಸೇರಿದಂತೆ 8,50,000 ರೂ. ಮËಲ್ಯದ ಒಂದು ಸ್ವಿಫ್ಟ್ ಕಾರು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಅನಿಲ, ಸಂತೋಷ ಮತ್ತು ರಾಜು ಅವರು 2010ರಲ್ಲಿ ಆಂಜನಿ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ್ದ ಕೃತ್ಯ ಬೆಳಕಿಗೆ ಬಂದಿದೆ. ಅನಿಲನ ಸ್ನೇಹಿತನಾದ ಆಂಜನಿಯನ್ನು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಜಾಪುರ ಅರಣ್ಯಪ್ರದೇಶದ ಹುಲಿಬೆಟ್ಟಕ್ಕೆ ಕರೆದೊಯ್ದು ಹಣಕಾಸಿನ ವಿಷಯದಲ್ಲಿ ಜಗಳ ತೆಗೆದು ಕೊಲೆ ಮಾಡಿದ್ದರು. ನಂತರ ಶವವನ್ನು ಅಲ್ಲಿಯೇ ಮಣ್ಣು ಮಾಡಿ ಪರಾರಿಯಾಗಿದ್ದರು. ಕಾರವಾರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ರಾಜೇಶ್ ಶಾಂತರಾಜ್ ನಾಯ್ಡು ಎಂಬುವರ ಕಾರನ್ನು ಬಾಡಿಗೆ ಪಡೆದ ಅನಿಲ, ಮಂಜ, ಕಾಂತ ಮತ್ತು ಉಮೇಶ ಮಾರ್ಗಮಧ್ಯೆ ಅವರನ್ನು ಕಟ್ಟಿ ಹಾಕಿ ಅವರ ಮೂಲಕ ಪತ್ನಿಗೆ ಹಣಕ್ಕಾಗಿ ಒತ್ತಾಯಿಸಿ ವಾಹನವನ್ನು ಅಪಹರಿಸಿ ಪರಾರಿಯಾಗಿದ್ದರು.

ಅಲ್ಲದೇ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಗಣೇಶ, ಶ್ರೀಮೂಕಾಂಬಿಕಾ ದೇವಾಲಯಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಐಮಂಗಲ ಠಾಣೆ ಸರಹದ್ದಿನ ಶ್ರೀಗಣೇಶ ದೇವಸ್ಥಾನದ ಹುಂಡಿಗಳನ್ನು ಒಡೆದು ಕಳ್ಳತನ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಆರೋಪಿಗಳನ್ನು ಈ ಹಿಂದೆ ಉಪ್ಪಾರಪೇಟೆ, ಮಾಗಡಿರಸ್ತೆ, ಹರಪನಹಳ್ಳಿ, ಸಂಡೂರು, ಚಿಕ್ಕಜಾಜೂರು, ಹಿರಿಯೂರು ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಡಿಸಿಪಿ ಅಜಯ್ ಹಿಲೋರಿ ಮಾರ್ಗದರ್ಶನ ಮತ್ತು ಎಸಿಸಿ ಸತ್ಯನಾರಾಯಣ ಕುದೂರ್ ಅವರ ನೇತೃತ್ವದಲ್ಲಿ ಕೆಂಗೇರಿ ಪೊೀಲಿಸ್ ಠಾಣೆ ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Comments are closed.