ಕರ್ನಾಟಕ

ಮಹದಾಯಿ, ಕಾವೇರಿ ಆಯ್ತು ನೀರು ಕೊಟ್ಟಾಯಿತು..ಈಗ ತುಂಗಾ ನದಿಗಾಗಿ ಹೊಸ ಖ್ಯಾತೆ !

Pinterest LinkedIn Tumblr

yunga

ಬಳ್ಳಾರಿ: ಮಹದಾಯಿ, ಕಾವೇರಿ ಆಯ್ತು ಈಗ ತುಂಗಾ ನದಿ ಸರದಿ. ತುಂಗಭದ್ರಾ ಡ್ಯಾಂನ ನೀರು ಬಿಡುವಂತೆ ಆಂಧ್ರಪ್ರದೇಶ ಹೊಸ ಕ್ಯಾತೆ ತೆಗೆದಿದೆ.

ಪ್ರತಿ ವರ್ಷ ಡಿಸೆಂಬರ್‍ನಲ್ಲಿ ತನ್ನ ಪಾಲಿನ ಶೇ.40 ರಷ್ಟು ನೀರನ್ನು ಆಂಧ್ರ ಪಡೀತಾ ಇತ್ತು. ಆದ್ರೆ ಈಗ ಸೆಪ್ಟೆಂಬರ್‍ನಲ್ಲಿ ನೀರು ಬಿಡುವಂತೆ ಪಟ್ಟು ಹಿಡಿದಿದೆ. ಅಲ್ಲದೇ ನೀರಾವರಿ ಸಲಹಾ ಸಮಿತಿ ಸಭೆಯ ಪರ್ಮಿಶನ್ ಪಡೆಯದೇ ತನ್ನ ಪಾಲಿನ ನೀರು ಕದ್ದು ಮುಚ್ಚಿ ಕೊಂಡೊಯ್ಯುತ್ತಿದೆ. ಈ ಬಾರಿ ಮಳೆ ಇಲ್ಲದೆ ಕಾರಣ ತುಂಗಭದ್ರಾ ಜಲಾಶಯದಲ್ಲಿ ಕೇವಲ 47 ಟಿಎಂಸಿ ನೀರು ಮಾತ್ರವಿದೆ.

ಹೀಗಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳೊ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಷ್ಟೆಲ್ಲಾ ಆದ್ರೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವ್ರೇ ಟಿಬಿ ಡ್ಯಾಮ್ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ರೂ ಚಕಾರ ಎತ್ತಿಲ್ಲ.ಇದರಿಂದ ರೈತರು ಆಕ್ರೋಶಗೊಂಡಿದ್ದಾರೆ.

Comments are closed.